ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಇದರಿಂದ ಯಾವುದೇ ಸಿಹಿ ಪದಾರ್ಥಗಳನ್ನು ತಿನ್ನುವ ಹಾಗಿಲ್ಲ. ಈ ಮಧುಮೇಹ ಸಮಸ್ಯೆ ತಡೆಯಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕು. ಅದಕ್ಕಾಗಿ ಈ ಆಹಾರಗಳನ್ನು ಸೇವಿಸಿ.
ಕಡಿಮೆ ಗ್ಲೈಸೆಮಿಕ್ ಸೂಚಿ (low glycemic- index) ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಹಾಗಾಗಿ ನೀವು ಮೊಟ್ಟೆ, ಓಟ್ಸ್, ಬಾರ್ಲಿ, ಬೀನ್ಸ್, ಮಸೂರ, ದ್ವಿದಳ ಧಾನ್ಯಗಳು, ಸಿಹಿ ಆಲೂಗಡ್ಡೆ ಮತ್ತು ಪಿಷ್ಠ ರಹಿತ ತರಕಾರಿಗಳನ್ನು ಸೇವಿಸಬೇಕು.
ಹಾಗೇ ಮೆಂತ್ಯಬೀಜಗಳಲ್ಲಿ ಕರಗಬಲ್ಲ ಫೈಬರ್ ಗಳು ಹೇರಳವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಕಾರಣ ಪ್ರತಿದಿನ ಮೆಂತ್ಯಕಾಳನ್ನು ಸೇವಿಸಿ.