alex Certify ಈ ಹಣ್ಣುಗಳನ್ನು ತಿನ್ನಿ, ಕ್ಯಾನ್ಸರ್ ನಿಂದ ದೂರವಿರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಣ್ಣುಗಳನ್ನು ತಿನ್ನಿ, ಕ್ಯಾನ್ಸರ್ ನಿಂದ ದೂರವಿರಿ….!

ಕ್ಯಾನ್ಸರ್ ಮಾರಕ ಖಾಯಿಲೆಗಳಲ್ಲೊಂದು. ಸೂರ್ಯನಿಂದಾಗುವ ಹಾನಿ, ಧೂಮಪಾನ, ಇನ್ಫೆಕ್ಷನ್ ಹೀಗೆ ಹಲವು ಕಾರಣಗಳಿಂದ ಕ್ಯಾನ್ಸರ್ ಬರುತ್ತದೆ. ಹಾಗಾಗಿ ಆಹಾರದ ಮೇಲೆ ಹಿಡಿತವಿದ್ರೆ ಇದನ್ನು ತಡೆಗಟ್ಟಬಹುದು. ಈ ಐದು ಹಣ್ಣುಗಳನ್ನು ತಿಂದ್ರೆ ನೀವು ಮಹಾಮಾರಿ ಕ್ಯಾನ್ಸರ್ ನಿಂದ ದೂರವಿರಬಹುದು.

ಸೇಬು : ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಅನ್ನೋ ಮಾತೇ ಇದೆ. ಸೇಬಿನಲ್ಲಿ ಫೈಬರ್, ಪೊಟಾಶಿಯಂ, ವಿಟಮಿನ್ ಸಿ ಇದೆ. ಕ್ಯಾನ್ಸರ್ ಸೆಲ್ಸ್ ವಿರುದ್ಧ ಹೋರಾಡುವ ನಿಮ್ಮ ಇಮ್ಯೂನ್ ವ್ಯವಸ್ಥೆಯನ್ನು ಸೇಬು ಗಟ್ಟಿಗೊಳಿಸುತ್ತದೆ.

ನಿಂಬೆ : ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ನಿಂಬೆ ಹಣ್ಣು ಬೆಸ್ಟ್. ಇದರಲ್ಲಿ ವಿಟಮಿನ್ ಸಿ ಸೇರಿದಂತೆ ಹಲವು ವಿಟಮಿನ್ ಗಳು ಹಾಗೂ ಮಿನರಲ್ ಗಳಿವೆ. ಇದು ಉದ್ವೇಗ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮರಸೇಬು (Pears) : ಇದರಲ್ಲಿ ಕಾಪರ್, ವಿಟಮಿನ್ ಕೆ ಸೇರಿದಂತೆ ಹಲವು ಪೋಷಕಾಂಶಗಳಿವೆ. ಕ್ಯಾನ್ಸರ್ ಅನ್ನು ದೂರ ಓಡಿಸಬಲ್ಲ ಆಂಥೋಸಯಾನಿನ್‌ಗಳು ಸಹ ಇವೆ.

ಬಾಳೆಹಣ್ಣು : ಇದು ಕ್ಯಾನ್ಸರ್ ರೋಗಿಗಳಲ್ಲಿ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಬಾಳೆಹಣ್ಣನ್ನು ತಿನ್ನುವುದು ಸಹ ಸುಲಭ. ವಾಂತಿಯ ಮೂಲಕ ದೇಹದಿಂದ ಹೊರಹೋದ ಎಲೆಕ್ಟ್ರೋಲೈಟ್ಸ್ ಅನ್ನು ಬಾಳೆಹಣ್ಣು ಪೂರೈಸುತ್ತದೆ.

ಬ್ಲೂಬೆರ್ರಿ : ಕ್ಯಾನ್ಸರ್ ನಿಂದ ರೋಗಿಗಳು ನೆನಪಿನ ಶಕ್ತಿ ಕಳೆದುಕೊಳ್ಳುತ್ತಾರೆ. ಬ್ಲೂಬೆರಿ ಹಣ್ಣು ಕಿಮೋ ಮೆದುಳನ್ನು ಸರಾಗಗೊಳಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಟಿ ಒಕ್ಸಿಡೆಂಟ್ಸ್, ವಿಟಮಿನ್ ಸಿ, ಫೈಬರ್, ಮ್ಯಾಂಗನೀಸ್ ಅಂಶವಿರುವುದರಿಂದ ಕ್ಯಾನ್ಸರ್ ಅನ್ನು ತಡೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...