ಮಕರ ಸಂಕ್ರಾಂತಿ ಹಬ್ಬಕ್ಕೆ ಭಾರತದಲ್ಲಿ ವಿಶೇಷ ಮಹತ್ವವಿದೆ. ಸಂಕ್ರಾಂತಿ ಬಳಿಕ ಚಳಿಗಾಲ ಮುಗಿದು ದಿನಗಳು ದೀರ್ಘವಾಗಲು ಪ್ರಾರಂಭವಾಗುತ್ತವೆ. ಇನ್ನೊಂದು ವಿಶೇಷತೆಯೆಂದರೆ ಮೊದಲ ಬೆಳೆಯನ್ನು ಮಕರ ಸಂಕ್ರಾಂತಿಯಂದು ಕೊಯ್ಲು ಮಾಡಲಾಗುತ್ತದೆ.
ಆದ್ದರಿಂದಲೇ ಈ ಹಬ್ಬಕ್ಕೆ ಹೆಚ್ಚು ಮಹತ್ವವಿದೆ. ಈ ದಿನ ಆರೋಗ್ಯಕರ ಆಹಾರವನ್ನು ಸೇವಿಸಲಾಗುತ್ತದೆ. ಸಂಕ್ರಾಂತಿ ಹಬ್ಬದಂದು ತಿನ್ನಲೇಬೇಕಾದ ಸೂಪರ್ ಫುಡ್‌ಗಳ ಬಗ್ಗೆ ತಿಳಿದುಕೊಳ್ಳೋಣ.
ಪೊಂಗಲ್
ಉತ್ತರದ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಹೆಸರಲ್ಲಿ ಹಬ್ಬದ ಆಚರಣೆಯಿದ್ದರೆ, ದಕ್ಷಿಣದ ರಾಜ್ಯಗಳಲ್ಲಿ ಪೊಂಗಲ್ ಅನ್ನು ಆಚರಿಸಲಾಗುತ್ತದೆ. ಪೊಂಗಲ್ ಎಂಬ ಖಾದ್ಯವನ್ನು ಹಬ್ಬದ ದಿನ ತಯಾರಿಸಲಾಗುತ್ತದೆ. ಇದು ದಕ್ಷಿಣದಲ್ಲಿ ಬಹಳ ಪ್ರಸಿದ್ಧವಾಗಿದೆ ಮತ್ತು ತಿನ್ನಲು ಸಹ ರುಚಿಕರವಾಗಿದೆ. ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಅಕ್ಕಿ ಮತ್ತು ಹೆಸರುಬೇಳೆಯಿಂದ ಇದನ್ನು ತಯಾರಿಸಲಾಗುತ್ತದೆ.
ಕಡಲೆಬೀಜ
ಚಳಿಗಾಲದಲ್ಲಿ ಕಡಲೆಕಾಯಿಯನ್ನು ಹೆಚ್ಚು ಸೇವಿಸಲಾಗುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಫೈಬರ್, ಮೆಗ್ನೀಸಿಯಮ್, ಸತು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಕಡಲೆಬೀಜದಲ್ಲಿವೆ.
ಎಳ್ಳು
ಮಕರ ಸಂಕ್ರಾಂತಿಯಂದು ಮಾರುಕಟ್ಟೆಯಲ್ಲಿ ಸಿಗುವ ಲಾಡು, ಚಿಕ್ಕಿ ಎಲ್ಲದಕ್ಕೂ ಎಳ್ಳು ಬಳಸಲಾಗುತ್ತದೆ. ಎಳ್ಳು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ವಿಟಮಿನ್ , ಪ್ರೋಟೀನ್ ಮತ್ತು ಕಬ್ಬಿಣವನ್ನು ಹೇರಳವಾಗಿ ಹೊಂದಿರುತ್ತದೆ.
ಬೆಲ್ಲ
ಮಕರ ಸಂಕ್ರಾಂತಿಯಂದು ಅನೇಕ ತಿನಿಸುಗಳಿಗೆ ಬೆಲ್ಲವನ್ನು ಬಳಸಲಾಗುತ್ತದೆ. ಬೆಲ್ಲ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಮಲಬದ್ಧತೆ, ಗ್ಯಾಸ್, ತಲೆನೋವು, ಮುಟ್ಟಿನ ನೋವು ಮತ್ತು ತೂಕ ನಷ್ಟಕ್ಕೆ ಇದು ಪ್ರಯೋಜನಕಾರಿಯಾಗಿದೆ. ಸಕ್ಕರೆಯ ಬದಲು ಬೆಲ್ಲವನ್ನೇ ಬಳಸಿ.