ಚಳಿಗಾಲ ಅಂದ್ರೆ ಸಾಕು ದೇಹದ ಆರೋಗ್ಯ, ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ ಹೀಗೆ ಎಲ್ಲಾ ಕಡೆ ಗಮನ ಕೊಡಬೇಕಾಗುತ್ತೆ.
ಮಾರುಕಟ್ಟೆಯಲ್ಲಿ ಚಳಿಗಾಲದ ಸೀಸನ್ನಲ್ಲಿ ಲಭ್ಯವಾಗೋ ಸಾಕಷ್ಟು ಹಣ್ಣು ಹಾಗೂ ತರಕಾರಿಗಳ ಬಗ್ಗೆ ನಿಮಗೆ ಮಾಹಿತಿ ಇರಬಹುದು. ಇದರಲ್ಲಿ ಸಿಹಿ ಗೆಣಸು ನಿಮ್ಮ ಆರೋಗ್ಯವನ್ನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಚಳಿಗಾಲದಲ್ಲಿ ಸಿಹಿ ಗೆಣಸನ್ನ ಸೇವಿಸೋದು ತುಂಬಾನೇ ಒಳ್ಳೆಯ ಅಭ್ಯಾಸ. ಇದರಲ್ಲಿರುವ ವಿಟಾಮಿನ್ ಎ, ಕ್ಯಾರೋಟಿನ್ ಅಂಶಗಳು ನಿಮ್ಮ ದೇಹವನ್ನ ಸೇರಲಿದೆ.
ಸಿಹಿ ಗೆಣಸಿನಲ್ಲಿ ಕಬ್ಬಿಣಾಂಶ, ಮ್ಯಾಗ್ನೀಶಿಯಂ, ವಿಟಾಮಿನ್ ಅಗಾಧ ಪ್ರಮಾಣದಲ್ಲಿ ಇದ್ದು ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲಿದೆ. ಅಲ್ಲದೇ ಮುಖದ ಆರೋಗ್ಯವನ್ನ ಕಾಪಾಡುವ ಕೆಲಸವನ್ನ ಸಿಹಿ ಗೆಣಸು ಮಾಡುತ್ತದೆ.
ಸಿಹಿ ಗೆಣಸಿನ ಸೇವನೆಯಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಅಲ್ಲದೇ ದೇಹದಲ್ಲಿನ ಸಕ್ಕರೆ ಅಂಶವನ್ನ ಹತೋಟಿಯಲ್ಲಿ ಇಡಲಿದೆ. ಹೃದಯ ಆರೋಗ್ಯ ಕಾಪಾಡುವಲ್ಲಿಯೂ ಗೆಣಸು ಪ್ರಮುಖ ಪಾತ್ರ ವಹಿಸುತ್ತೆ.