ಸೀಸನಲ್ ಫ್ರುಟ್ ಅಥವಾ ಆಯಾ ಕಾಲಘಟ್ಟದಲ್ಲಿ ಲಭಿಸುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ತಜ್ಞರು ಹಾಗೂ ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಆಗಸ್ಟ್ ಮತ್ತು ನವೆಂಬರ್ ತಿಂಗಳಿನಲ್ಲಿ ಈ ಸೀತಾಫಲ (ಕಸ್ಟರ್ಡ್ ಆ್ಯಪಲ್) ಹಣ್ಣು ಹೇರಳವಾಗಿ ಲಭ್ಯವಾಗುತ್ತದೆ.
ಇದನ್ನು ಸೇವಿಸುವುದರಿಂದ ಅಲ್ಸರ್ ಹಾಗೂ ಅಸಿಡಿಟಿಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇವು ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದ್ದು ಅದು ನಿಮಗೆ ಮೃದುವಾದ ಚರ್ಮದ ಟೋನ್ ನೀಡುತ್ತದೆ. ಇದರಲ್ಲಿ ಆ್ಯಂಟಿ ಕ್ಯಾನ್ಸರ್ ಗುಣವಿದ್ದು ಯಾವುದೇ ಪ್ರಕಾರದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಕಣ್ಣು ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮಕ್ಕಳು ಸೇವಿಸುವುದರಿಂದ ಬುದ್ಧಿಶಕ್ತಿ ಚುರುಕಾಗುತ್ತದೆ.
ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯರು ವಾರಕ್ಕೊಂದು ಹಣ್ಣು ತಿನ್ನುವುದರಿಂದ ಮಗು ಹಾಗೂ ತಾಯಿಯ ಆರೋಗ್ಯ ಉತ್ತಮ ವಾಗಿರುತ್ತದೆ.
ಬೊಜ್ಜು ಮತ್ತು ಮಧುಮೇಹ ಮೊದಲಾದ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಒಳಗೊಂಡಿದೆ. ಹಾಗೂ ಇದರಲ್ಲಿ ಕೊಬ್ಬಿನಾಂಶವಿಲ್ಲ.