alex Certify ಪೈನಾಪಲ್ ತಿನ್ನಿ ಈ ಸಮಸ್ಯೆಗಳಿಗೆಲ್ಲಾ ‘ಗುಡ್ ಬೈ’ ಹೇಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈನಾಪಲ್ ತಿನ್ನಿ ಈ ಸಮಸ್ಯೆಗಳಿಗೆಲ್ಲಾ ‘ಗುಡ್ ಬೈ’ ಹೇಳಿ

ಸಿಹಿ ಹುಳಿ ಮಿಶ್ರಣವಿರುವ ಪೈನಾಪಲ್ ಹಣ್ಣನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಹೊರಗಿನಿಂದ ಮುಳ್ಳುಮುಳ್ಳಾಗಿ ಕಂಡರೂ ಒಳಗಿನ ರುಚಿ ಎಲ್ಲರನ್ನೂ ಮರಳು ಮಾಡುತ್ತದೆ. ಇದನ್ನು ಪದಾರ್ಥಗಳ ಮೂಲಕ, ಹಸಿಯಾಗಿ ಇಲ್ಲವೆ ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಇದರ ಸ್ವಾಸ್ಥ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.

ವಿಟಮಿನ್ ಸಿ, ನಾರಿನಾಂಶ ಹಾಗು ಪೌಷ್ಟಿಕಾಂಶಗಳು ಹೇರಳವಾಗಿರುವ ಪೈನಾಪಲ್ ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ಗ್ಲುಕೋಸ್ ಗಳಂತಹ ನೈಸರ್ಗಿಕ ಸಕ್ಕರೆಯ ಅಂಶಗಳನ್ನು ಹೊಂದಿದೆ. ಬೇರೆ ಹಣ್ಣುಗಳೊಂದಿಗೆ ಫ್ರುಟ್ ಸಲಾಡ್ ರೂಪದಲ್ಲಿ ಸೇವಿಸಿದರೂ ಈ ಪೌಷ್ಟಿಕಾಂಶಗಳು ದೇಹವನ್ನು ಸೇರುತ್ತವೆ.

ಊಟದ ಬಳಿಕ ಈ ಹಣ್ಣುಗಳ ತುಂಡುಗಳಿಗೆ ಚಿಟಿಕೆ ಉಪ್ಪು ಹಾಗೂ ಕಾಳು ಮೆಣಸಿನ ಪುಡಿ ಉದುರಿಸಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಅಲ್ಲದೆ ಪಿತ್ತದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದರಿಂದ ಕೆಮ್ಮು ಕಫದ ತೊಂದರೆಯೂ ಇಲ್ಲವಾಗುತ್ತದೆ.

ಪೈನಾಪಲ್ ಹಣ್ಣಿನ ರಸಕ್ಕೆ ಜೇನು ಸೇರಿಸಿ ಸವಿಯುವುದರಿಂದ ಯಕೃತ್ತಿನ ರೋಗಗಳು ವಾಸಿಯಾಗುತ್ತವೆ. ಕಣ್ಣಿನ ಸುತ್ತ ಊದಿಕೊಳ್ಳುವ ಸಮಸ್ಯೆಯೂ ಇದರ ಸೇವನೆಯಿಂದ ಕಡಿಮೆಯಾಗುತ್ತದೆ. ಹಾಗಿದ್ದರೆ ತಡ ಏಕೆ ಇಂದೇ ಪೈನಾಪಲ್ ಸೇವಿಸಿ, ಪ್ರಯೋಜನಗಳನ್ನು ಪಡೆದುಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...