ಮಧುಮೇಹ ನಿಯಂತ್ರಿಸುವಲ್ಲಿ ರಾಗಿಯ ಪಾತ್ರ ಬಲು ದೊಡ್ಡದು. ಅಕ್ಕಿ ಅಥವಾ ಗೋಧಿಯ ಚಪಾತಿ ಸೇವನೆ ಮಾಡುವುದಕ್ಕಿಂತ ರಾಗಿ ಮುದ್ದೆ ಅಥವಾ ರಾಗಿ ದೋಸೆ ಸೇವನೆ ಬಹಳ ಒಳ್ಳೆಯದು.
ನಾರಿನಂಶದೊಂದಿಗೆ ಹಲವಾರು ವಿಟಮಿನ್ ಮತ್ತು ಖನಿಜಾಂಶಗಳನ್ನು ಒಳಗೊಂಡಿರುವ ರಾಗಿ ಜೀರ್ಣಸಂಬಂಧಿ ಸಮಸ್ಯೆಗಳನ್ನು ಬಹುಬೇಗ ದೂರ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುವ ರಾಗಿಯನ್ನು ಫೈಲ್ಸ್ ಸಮಸ್ಯೆ ಇರುವವರು ನಿತ್ಯ ಸೇವಿಸಬೇಕು.
ನಿಮಗೆ ಕಫದ ಸಮಸ್ಯೆ ಇದ್ದರೆ ಚಳಿಗಾಲದಲ್ಲಿ ರಾಗಿಯನ್ನು ಕುದಿಸಿ ಕುಡಿಯುವಾಗ ಅದಕ್ಕೆ ಹಾಲು ಬೆರೆಸದಿರಿ. ಬದಲಿಗೆ ನೀರು ಹಾಗೂ ಚಿಟಿಕೆ ಉಪ್ಪು ಬೆರೆಸಿ ಕುದಿಸಿ ಕುಡಿದರೆ ಹಿಮೋಗ್ಲೋಬಿನ್ ಸಮಸ್ಯೆಯೂ ದೂರವಾಗುತ್ತದೆ. ದೇಹಕ್ಕೆ ಚೈತನ್ಯವೂ ದೊರೆಯುತ್ತದೆ.
ಮಕ್ಕಳಿಗೆ ರಾಗಿ ಹೇಳಿ ಮಾಡಿಸಿದ ಆಹಾರ. ಆರು ತಿಂಗಳು ಕಳೆದ ಬಳಿಕ ಮಗುವಿಗೆ ಆಹಾರ ತಿನಿಸಲು ಆರಂಭಿಸುತ್ತಲೇ ರಾಗಿ ಪುಡಿ ಅಥವಾ ಮಣ್ಣಿಯನ್ನು ಕೊಡಲಾಗುತ್ತದೆ. ಸುಲಭವಾಗಿ ಜೀರ್ಣವಾಗುವ ಇದು ಮಗುವಿನ ಆರೋಗ್ಯವನ್ನು ಉತ್ತಮವಾಗಿಡುತ್ತದೆ. ಯಾವ ಅಡ್ಡಪರಿಣಾಮಗಳೂ ಉಂಟಾಗುವುದಿಲ್ಲ.