ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ತೂಕ ಇಳಿಸಿಕೊಳ್ಳುವವರು ಈ ಸಿಹಿಯಿಂದ ದೂರವಿದ್ದರೆ ತುಂಬಾ ಒಳ್ಳೆಯದು.
ಬೇರೆಯವರು ಏನಾದರೂ ಸಿಹಿ ತಿನ್ನುವುದನ್ನು ನೋಡಿ ತಿನ್ನಬೇಕು ಅನಿಸುವುದು ಸಹಜ. ತಿಂದರೆ ತೂಕ ಹೆಚ್ಚಾಗುತ್ತೆ ಎಂಬ ಭಯ ಕಾಡುತ್ತೆ. ಹಾಗಿದ್ದವರು ತಮ್ಮ ಬಾಯಿಯ ಚಪಲವನ್ನು ತೀರಿಸಿಕೊಳ್ಳಲು ಖರ್ಜೂರವನ್ನು ತಿನ್ನಿ. ಇದರಿಂದ ಸಿಹಿ ತಿನ್ನಬೇಕು ಎಂಬ ಆಸೆ ಈಡೇರುತ್ತೆ ಜತೆಗೆ ತೂಕ ಕೂಡ ಹೆಚ್ಚಾಗುವುದಿಲ್ಲ.
ಖರ್ಜೂರದಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ-ಕ್ಯಾನ್ಸರ್ ಪ್ರಾಪರ್ಟಿ ಇದೆ. ಖರ್ಜೂರದಲ್ಲಿ ಪ್ರೋಟೀನ್ ಕೂಡ ಹೇರಳವಾಗಿದೆ. ಇದು ನಿಮ್ಮ ಮಾಂಸಖಂಡಗಳನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಡಯೆಟ್ರಿ ಫೈಬರ್ ಕೂಡ ಇದೆ. ಹಾಗಾಗಿ ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ತೂಕ ಹೆಚ್ಚಾಗದಂತೆ ತಡೆಯುತ್ತದೆ.
ಇನ್ನು ಇದರಲ್ಲಿ ಕಬ್ಬಿಣದಂಶ, ಫೈಬರ್, ಪೋಟ್ಯಾಷಿಯಂ ಕೂಡ ಇದೆ. ಹಾಗೇ ಇದು ಸಿಹಿಯಾಗಿರುವುದರಿಂದ ಸಿಹಿ ತಿನ್ನಬೇಕು ಎಂಬ ಆಸೆಯನ್ನು ಕೂಡ ತೃಪ್ತಿಪಡಿಸುತ್ತದೆ. ಸ್ನ್ಯಾಕ್ಸ್ ರೀತಿ ಕೂಡ ಇದನ್ನು ತಿನ್ನಬಹುದು. ಟೀ ಕಾಫಿ ಜತೆ ಕೂಡ ಸೇವಿಸಬಹುದು. ದಿನಕ್ಕೆ 4ರಿಂದ 6 ಖರ್ಜೂರವನ್ನು ತಿನ್ನಬಹುದು.
ತೂಕ ಇಳಿಸಿಕೊಳ್ಳ ಬಯಸುವವರು ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು 20 ನಿಮಿಷ ಬಿಟ್ಟು 4 ಖರ್ಜೂರವನ್ನು ತಿನ್ನಿ. ಇದು ನಿಮಗೆ ವರ್ಕೌಟ್ ಮಾಡುವುದಕ್ಕೆ ಬೇಕಾಗುವ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ಇದರಲ್ಲಿ ವಿಟಮಿನ್ ಎ, ಬಿ6, ಬಿ12, ಸಿ ಹಾಗೂ ಕೆ ಹೇರಳವಾಗಿದೆ. ಕಣ್ಣು, ಚರ್ಮದ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಇನ್ನು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೂಡ ಈ ಖರ್ಜೂರ ಸೇವಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು.