alex Certify ಮಳೆಗಾಲದಲ್ಲಿ ತಪ್ಪದೇ ಸೇವಿಸಿ ಬಿಸಿ ಬಿಸಿ ಮೆಕ್ಕೆಜೋಳ; ಇದರಲ್ಲಿವೆ 6 ಪ್ರಚಂಡ ಪ್ರಯೋಜನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ತಪ್ಪದೇ ಸೇವಿಸಿ ಬಿಸಿ ಬಿಸಿ ಮೆಕ್ಕೆಜೋಳ; ಇದರಲ್ಲಿವೆ  6 ಪ್ರಚಂಡ ಪ್ರಯೋಜನಗಳು

ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಸೋಂಕುಗಳ ಹಾವಳಿ ಹೆಚ್ಚು. ಇದರಿಂದಾಗಿ ಅನೇಕ ರೀತಿಯ ಕಾಯಿಲೆಗಳು ಸಹ ಕಾಡುತ್ತವೆ. ಹಾಗಾಗಿ ಮಾನ್ಸೂನ್‌ನಲ್ಲಿ ವಿಶೇಷ ರೀತಿಯ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಬೇಯಿಸಿದ ಅಥವಾ ಕೆಂಡದಲ್ಲಿ ಸುಟ್ಟಿರುವ ಮೆಕ್ಕೆಜೋಳ ಮಳೆಗಾಲಕ್ಕೆ ಹೇಳಿಮಾಡಿಸಿದಂತಿರುತ್ತದೆ.

ಮುಂಗಾರು ಶುರುವಾಗುತ್ತಿದ್ದಂತೆಯೇ ಮೆಕ್ಕೆಜೋಳ ಮಾರುಕಟ್ಟೆಗೆ ಬರುತ್ತದೆ. ಇದು ಹೇರಳವಾದ ಪೋಷಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಪ್ರಯೋಜನಕಾರಿ.

ಪಿಷ್ಟ, ಫೈಬರ್, ಪ್ರೋಟೀನ್‌ ಮತ್ತು ಕೊಬ್ಬುಗಳಂತಹ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಮೆಕ್ಕೆಜೋಳದಲ್ಲಿ ಹೇರಳವಾಗಿವೆ. ವಿಟಮಿನ್ ಬಿ ಕಾಂಪ್ಲೆಕ್ಸ್, ಬಿ-ಕ್ಯಾರೋಟಿನ್ ಮತ್ತು ಅಗತ್ಯವಾದ ಖನಿಜಗಳಂತಹ ಸೂಕ್ಷ್ಮ ಪೋಷಕಾಂಶಗಳನ್ನು ಸಹ ಇದು ಮೆಗ್ನೀಸಿಯಮ್, ಸತು, ರಂಜಕ ಮತ್ತು ತಾಮ್ರವೂ ಜೋಳದ ಧಾನ್ಯಗಳಲ್ಲಿ ಹೇರಳವಾಗಿದೆ.

ರೋಗನಿರೋಧಕ ಶಕ್ತಿ ವರ್ಧಕ

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಜೋಳದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಕಾಯಿಲೆಗಳ  ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಜೀರ್ಣಾಂಗ ವ್ಯವಸ್ಥೆ ಸುಧಾರಣೆ

ಮೆಕ್ಕೆಜೋಳವು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಮಾನ್ಸೂನ್ ಸಮಯದಲ್ಲಿ ಸಂಭವಿಸುವ ಜೀರ್ಣಕಾರಿ ಅಸ್ವಸ್ಥತೆಗಳನ್ನು ತಪ್ಪಿಸಲು ಮೆಕ್ಕೆಜೋಳವನ್ನು ಸೇವಿಸಬಹುದು.

ಹೃದಯದ ಆರೋಗ್ಯ

ಮೆಕ್ಕೆಜೋಳದಲ್ಲಿರುವ ಮೆಗ್ನೀಸಿಯಮ್ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ತೂಕ ನಿಯಂತ್ರಣ

ಮೆಕ್ಕೆಜೋಳವು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ. ಫೈಬರ್‌ ಇದರಲ್ಲಿ ಸಮೃದ್ಧವಾಗಿದೆ. ಈ ಎರಡೂ ಅಂಶಗಳು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಬಿಸಿಯಾಗಿ ಏನನ್ನಾದರೂ ತಿನ್ನಬೇಕೆಂಬ ಕ್ರೇವಿಂಗ್‌ ಅನ್ನು ಕೂಡ ಇದು ತಣಿಸುತ್ತದೆ.

ರಕ್ತಹೀನತೆಗೆ ಪರಿಹಾರ

ಮೆಕ್ಕೆಜೋಳದಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದ್ದು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ತಪ್ಪದೇ ಮೆಕ್ಕೆಜೋಳವನ್ನು ಸೇವಿಸಿ.

ಚರ್ಮಕ್ಕೆ ಪ್ರಯೋಜನಕಾರಿ

ಮೆಕ್ಕೆಜೋಳದಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಒಳ್ಳೆಯದು. ಇದು ಚರ್ಮವನ್ನು ಹೈಡ್ರೀಕರಿಸುತ್ತದೆ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಲು ಮೆಕ್ಕೆಜೋಳವನ್ನು ಸೇವಿಸಬಹುದು.

ಜೋಳವನ್ನು ಹಲವು ವಿಧಗಳಲ್ಲಿ ತಿನ್ನಬಹುದು. ಇದನ್ನು ಫ್ರೈ ಮಾಡಬಹುದು, ಬೇಯಿಸಿ ಅಥವಾ ಸುಟ್ಟು ತಿನ್ನಬಹುದು. ರೊಟ್ಟಿ ಮಾಡಬಹುದು ಅಥವಾ ಕಾರ್ನ್ ಫ್ಲೋರ್ ಬಳಸಿ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದು. ಮಾನ್ಸೂನ್ ಸಮಯದಲ್ಲಿ ಜೋಳದ ಚಟ್ನಿ ಕೂಡ ತುಂಬಾ ರುಚಿಯಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...