
ಬೇಳೆ ಸಾರು, ದಾಲ್ ಎಂದರೆ ಮನೆಯಲ್ಲಿ ಎಲ್ಲರಿಗೂ ಇಷ್ಟವೇ. ಬಿಸಿ ಅನ್ನದೊಂದಿಗೆ ದಾಲ್ ಹಾಕಿ ಸವಿಯುವುದು ನಿಮಗಿಷ್ಟವೇ. ಹಾಗಿದ್ದರೆ ಇಲ್ಲಿ ಕೇಳಿ.
ಬಿಸಿ ಅನ್ನಕ್ಕೆ ದಾಲ್ ಸೇರಿಸಿ ಕಲಸಿ ಊಟ ಮಾಡುವ ಮುನ್ನ ಅನ್ನದ ಮೇಲೆ ಒಂದು ಚಮಚ ತುಪ್ಪ ಹಾಕಿ ಕಲಸಿಕೊಳ್ಳಿ. ಇದರಿಂದ ನೀವು ಹಲವು ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು. ದಾಲ್-ರೈಸ್ ಹಾಗೂ ತುಪ್ಪದ ಕಾಂಬಿನೇಷನ್ ಅತ್ಯುತ್ತಮ ಪ್ರಮಾಣದ ಪ್ರೊಟೀನ್ ಅನ್ನು ಒದಗಿಸುತ್ತದೆ.
ಮನೆಯಲ್ಲೇ ತಯಾರಿಸಿದ ದೇಸೀ ಹಸುವಿನ ತುಪ್ಪ ಕೊಬ್ಬನ್ನು ಕರಗಿಸುತ್ತದೆ. ಇವು ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ದಾಲ್ ಮೂಲತಃ ಆಸಿಡಿಟಿ ಉಂಟು ಮಾಡಿದರೂ ಅದಕ್ಕೆ ಬೆರೆಸುವ ಇಂಗು ಮತ್ತು ಜೀರಿಗೆ ಜೀರ್ಣ ಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ಮಧುಮೇಹ ನಿಯಂತ್ರಿಸಿ ದೇಹ ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಉಸಿರಾಟದ ತೊಂದರೆ ಮತ್ತು ಸೋಂಕಿನಿಂದ ಮುಕ್ತಿ ನೀಡುತ್ತದೆ.