ಚಳಿಗಾಲ ಬಂತೆಂದರೆ ವಾತಾವರಣದಲ್ಲಿ ಹಲವು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ದೇಹದ ಖಾಯಿಲೆಗಳು ಕೂಡ ಉಲ್ಬಣವಾಗುತ್ತವೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕು. ರೋಗ ನಿರೋಧ ಶಕ್ತಿ ಕಡಿಮೆಯಾಗುವ ಕಾರಣ, ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡಬೇಕು. ಜೊತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಚಳಿಕಾಲದಲ್ಲಿ ನೆಲ್ಲಿಕಾಯಿ ಸೇವನೆಗೆ ಮಹತ್ವ ನೀಡಬೇಕು.
ನೆಲ್ಲಿಕಾಯಿ ವಿಟಮಿನ್ ಸಿಯ ಆಗರ. ಇದು ಎಂಟಿಆಕ್ಸಿಡೆಂಟ್ ಮತ್ತು ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಕೂದಲು ಉದುರುವುದು, ಎಸಿಡಿಟಿ ಸಮಸ್ಯೆ ದೂರವಾಗುತ್ತದೆ. ಇದು ತೂಕ ಇಳಿಸುವಲ್ಲಿ ನೆರವಾಗುತ್ತದೆ.
ನೆಲ್ಲಿಕಾಯಿ ಮಧುಮೇಹ, ಕ್ಯಾನ್ಸರ್, ಹೃದಯದ ತೊಂದರೆ, ಮಲಬದ್ಧತೆಯ ತೊಂದರೆಯನ್ನು ನಿವಾರಿಸುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಇನ್ಫೆಕ್ಷನ್, ಶೀತಗಳಿಗೂ ನೆಲ್ಲಿಕಾಯಿ ದಿವ್ಯೌಷಧವಾಗಿದೆ.
ಚಳಿಗಾಲದಲ್ಲಿ ನೆಲ್ಲಿಕಾಯಿಯನ್ನು ಅತ್ಯಗತ್ಯವಾಗಿ ಸೇವನೆ ಮಾಡಬೇಕು. ಅದನ್ನು ಚವನಪ್ರೆಶ್ ರೂಪದಲ್ಲಿ ಸೇವಿಸಬಹುದು. ಬಿಸಿ ನೀರಿಗೆ ನೆಲ್ಲಿಕಾಯಿ ಹಾಕಿ ಕುದಿಸಿ, ಆ ನೀರನ್ನು ಸೇವನೆ ಮಾಡಬಹುದು. ನೆಲ್ಲಿಕಾಯಿಯ ಉಪ್ಪಿನಕಾಯಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದು ರುಚಿಯ ಜೊತೆ ಆರೋಗ್ಯವನ್ನೂ ಹೆಚ್ಚಿಸುತ್ತದೆ.