ಹಣ್ಣು, ತರಕಾರಿ ಹಾಗೂ ಒಣ ಹಣ್ಣುಗಳಲ್ಲಿ ನಮಗೆ ತಿಳಿಯದೆ ಇರುವ ಪೋಷಕಾಂಶಗಳು ಇರುತ್ತೆ.
ಅದರಲ್ಲೂ ಪ್ರಮುಖವಾಗಿ ಮರುಭೂಮಿಯಲ್ಲಿ ಬೆಳೆಯುವಂತಹ ಖರ್ಜೂರ ದೇಹಕ್ಕೆ ತುಂಬಾ ಲಾಭಕಾರಿ.
ಉಷ್ಣಾಂಶ ಹೆಚ್ಚು ಇರುವುದರಿಂದ ಚಳಿಗಾಲದಲ್ಲಿ ಇದನ್ನು ಬಳಸಬಹುದು. ಅದ್ಭುತ ಶಕ್ತಿವರ್ಧಕ ಮತ್ತು ಶಕ್ತಿಶಾಲಿ ವಿಟಮಿನ್ ಹಾಗೂ ಖನಿಜಾಂಶಗಳಿವೆ. ಉನ್ನತ ಮಟ್ಟದ ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಕೂಡ ಇದೆ.
ತಾಜಾ ಖರ್ಜೂರಕ್ಕೆ ಹೋಲಿಸಿದರೆ ಒಣ ಖರ್ಜೂರದಲ್ಲಿ ತೇವಾಂಶ ಕಡಿಮೆ. ಹಾಗಾಗಿ ಇದು ದೀರ್ಘ ಕಾಲ ಬಾಳಿಕೆ ಬರುತ್ತೆ. ಇಷ್ಟೆಲ್ಲಾ ಲಾಭಗಳನ್ನು ಹೊಂದಿರುವ ಒಣ ಖರ್ಜೂರ ದಿನಕ್ಕೆ ಎರಡೇ ಎರಡು ತಿಂದರೂ ಸಾಕು, ಆರೋಗ್ಯಕ್ಕೆ ಬಹಳ ಒಳ್ಳೆಯದು.