ತೂಕ ಹೆಚ್ಚಾದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ಅಧಿಕ ತೂಕಕ್ಕೆ ನಿಮ್ಮ ಆಹಾರ ಪದ್ಧತಿ, ಅನಾರೋಗ್ಯ, ಒತ್ತಡ, ಕುಳಿತಲ್ಲೇ ಕುಳಿತು ಕೆಲಸ ಮಾಡುವುದು ಕಾರಣವಾಗಬಹುದು ಈ ಸಮಸ್ಯೆಯಿಂದ ಸುಲಭವಾಗಿ ಹೊರ ಬರಬಹುದು. ನಿತ್ಯದ ಆಹಾರದ ಜೊತೆ ಸೈಡ್ ಡಿಶ್ ಸೇವಿಸಿ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಕಾರ್ನ್ ರೈತಾ ತೂಕ ಇಳಿಸಲು ಸಹಕಾರಿ.
ಕಾರ್ನ್ ರೈತಾ ಮಾಡಲು ಬೇಕಾಗುವ ಪದಾರ್ಥಗಳು :
ಮೆಕ್ಕೆಜೋಳ – 200 ಗ್ರಾಂ
ಕೆಂಪು ಮೆಣಸಿನ ಪುಡಿ – 1 ಚಮಚ
ಟೊಮ್ಯಾಟೊ – 100 ಗ್ರಾಂ
ಮೊಸರು – 250 ಗ್ರಾಂ
ಈರುಳ್ಳಿ – 100 ಗ್ರಾಂ
ಕಪ್ಪು ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಕಾರ್ನ್ ರೈತಾ ಮಾಡುವ ವಿಧಾನ :
ಮೊದಲು ಈರುಳ್ಳಿ ಮತ್ತು ಟೊಮ್ಯಾಟೊ ಕತ್ತರಿಸಿ. ಸರ್ವಿಂಗ್ ಬೌಲ್ ಗೆ ಮೊಸರು, ಕತ್ತರಿಸಿದ ಈರುಳ್ಳಿ ಮತ್ತು ಟೊಮ್ಯಾಟೊಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಂತೆ ಅದಕ್ಕೆ ಕಪ್ಪು ಉಪ್ಪು ಸೇರಿಸಿ. ಜೋಳ ಮತ್ತು ಸ್ವಲ್ಪ ಉಪ್ಪನ್ನು 5-6 ನಿಮಿಷಗಳ ಕಾಲ ನೀರಿನೊಂದಿಗೆ ಕುಕ್ಕರ್ ನಲ್ಲಿ ಕುದಿಸಿ. ಮೊಸರಿಗೆ ಬೇಯಿಸಿದ ಜೋಳವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ರೈತಾದ ಮೇಲೆ ಸ್ವಲ್ಪ ಕೆಂಪು ಮೆಣಸಿನ ಪುಡಿ ಸಿಂಪಡಿಸಿ. 6-7 ನಿಮಿಷಗಳ ಕಾಲ ತಣ್ಣಗಾಗಲು ಫ್ರಿಜ್ ನಲ್ಲಿಡಿ. ಜೋಳದ ರೈತಾ ಸಿದ್ಧ. ಇದನ್ನು ಆಗಾಗ ಸೇವಿಸುತ್ತಿರಿ.ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ.