ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಚಳಿಗಾಲ ಕ್ಯಾರೆಟ್ ಸೀಸನ್ ಆಗಿದ್ದರೂ ವರ್ಷವಿಡೀ ಇದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಕೆಂಪು ಮತ್ತು ಕಿತ್ತಳೆ ಬಣ್ಣದ ಕ್ಯಾರೆಟ್ ಎಲ್ಲರಿಗೂ ಗೊತ್ತು. ಆದರೆ ಕಪ್ಪು ಬಣ್ಣದ ಕ್ಯಾರೆಟ್ ಅನ್ನು ಬಹುತೇಕರು ನೋಡಿರಲಿಕ್ಕಿಲ್ಲ. ಕಪ್ಪು ಕ್ಯಾರೆಟ್ ತೂಕವನ್ನು ಕಡಿಮೆ ಮಾಡಬಲ್ಲದು.
ಕಪ್ಪು ಕ್ಯಾರೆಟ್ ಮಾರುಕಟ್ಟೆಯಲ್ಲಿ ದೊರಕುವುದು ಅಪರೂಪ. ಇದರಲ್ಲಿ ಪೋಷಕಾಂಶಗಳು ಸಾಕಷ್ಟಿವೆ. ನಿಯಮಿತವಾಗಿ ಕಪ್ಪು ಕ್ಯಾರೆಟ್ ಅನ್ನು ಸೇವಿಸಿದರೆ ಅದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ತರಕಾರಿಯಲ್ಲಿರುವ ಬೊಜ್ಜು ವಿರೋಧಿ ಗುಣವು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
ಕಪ್ಪು ಕ್ಯಾರೆಟ್‌ನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಎಂಟಿಒಕ್ಸಿಡೆಂಟ್‌ಗಳಿವೆ. ತುಂಬಾ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಮತ್ತು ಸಕ್ಕರೆಯನ್ನು ಇದು ಹೊಂದಿರುತ್ತದೆ. ಹಾಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಕಪ್ಪು ಕ್ಯಾರೆಟ್‌ನಲ್ಲಿ ಬಹಳಷ್ಟು ಫೈಬರ್ ಇರುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಈ ತರಕಾರಿ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡುವುದಲ್ಲದೆ, ದೇಹದಿಂದ ವಿಷವನ್ನು ತೆಗೆದುಹಾಕಬಲ್ಲದು. ಕಪ್ಪು ಕ್ಯಾರೆಟ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಕಪ್ಪು ಕ್ಯಾರೆಟ್ ಸೇವನೆ ಹೇಗೆ ?
ಇದನ್ನು ಚೆನ್ನಾಗಿ ತೊಳೆದು ಹಸಿಯಾಗಿಯೇ ತಿನ್ನಬಹುದು. ಮಣ್ಣು ಅಥವಾ ಕೊಳೆ ಸರಿಯಾಗಿ ಸ್ವಚ್ಛವಾಗಿಲ್ಲ ಎನಿಸಿದರೆ ಸಿಪ್ಪೆಯನ್ನು ತೆಳುವಾಗಿ ತೆಗೆದುಹಾಕಿ ತಿನ್ನಿ.
ಕಪ್ಪು ಕ್ಯಾರೆಟ್ ಅನ್ನು ಹೆಚ್ಚಾಗಿ ಸಲಾಡ್‌ಗೆ ಬಳಸಲಾಗುತ್ತದೆ.ಇದರ ಜೊತೆಗೆ ಟೊಮೆಟೊ, ಮೂಲಂಗಿ, ಸೌತೆಕಾಯಿ, ನಿಂಬೆ ಮತ್ತು ಉಪ್ಪು ಬೆರೆಸಿ ತಿನ್ನಬಹುದು. ಕ್ಯಾರೆಟ್ ಅನ್ನು ಜಗಿದು ತಿನ್ನಲು ಇಷ್ಟವಿಲ್ಲದಿದ್ದರೆ ಮಿಕ್ಸಿಯಲ್ಲಿ ರುಬ್ಬಿಕೊಂಡು ಜ್ಯೂಸ್ ತಯಾರಿಸಿ ಕುಡಿಯಬಹುದು. ಈ ಜ್ಯೂಸ್ ತೂಕವನ್ನು ಕಡಿಮೆ ಮಾಡುತ್ತದೆ.