alex Certify ದೇಹದಲ್ಲಿನ ವಿಷಕಾರಿ ಅಂಶ ಹೊರ ಹಾಕುವ ಬಾಳೆಕಾಯಿ ಸೇವಿಸಿ; ಆರೋಗ್ಯ ನಿಮ್ಮದಾಗಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹದಲ್ಲಿನ ವಿಷಕಾರಿ ಅಂಶ ಹೊರ ಹಾಕುವ ಬಾಳೆಕಾಯಿ ಸೇವಿಸಿ; ಆರೋಗ್ಯ ನಿಮ್ಮದಾಗಿಸಿ

ಬಾಳೆಹಣ್ಣಿನಂತೆ ಬಾಳೆಕಾಯಿಯಲ್ಲೂ ಹಲವು ಬಗೆಯ ಆರೋಗ್ಯಕರ ಅಂಶಗಳಿವೆ.

ಬಾಳೆಕಾಯಿಯನ್ನು ಬೇಯಿಸಿ ಪಲ್ಯ, ಚಿಪ್ಸ್, ಬಜ್ಜಿ, ಸಾಂಬಾರ್ ತಯಾರಿಸುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಬಾಳೆಕಾಯಿ ಸಹಕಾರಿ ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ.

ಜೀರ್ಣಕ್ರಿಯೆಗೂ ಇದು ಸಹಕಾರಿ. ತೂಕ ಇಳಿಸಲು ನೆರವಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ರಕ್ತ ಶುದ್ಧೀಕರಣ ಕ್ರಿಯೆಯಲ್ಲಿ ಸಹಕರಿಸುತ್ತದೆ. ಬಾಳೆಕಾಯಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು ನರಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಎರಡನೇ ಹಂತದ ಮಧುಮೇಹ ನಿಯಂತ್ರಿಸಲು ಹಸಿರು ಬಾಳೆಕಾಯಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿರುತ್ತದೆ.

ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ ಬಿ 6 ಅಂಶಗಳು ಹೇರಳವಾಗಿ ಸಿಗುತ್ತದೆ ವಿಟಮಿನ್ ಬಿ 6, ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಇದು ನಿಯಂತ್ರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...