alex Certify ವಾರಕ್ಕೆ ಒಮ್ಮೆಯಾದರೂ ಸೇವಿಸಿ ಜೀವಸತ್ವಗಳ ಆಗರವಾದ ʼಪಾಲಕ್ʼ ಸೊಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಕ್ಕೆ ಒಮ್ಮೆಯಾದರೂ ಸೇವಿಸಿ ಜೀವಸತ್ವಗಳ ಆಗರವಾದ ʼಪಾಲಕ್ʼ ಸೊಪ್ಪು

ಸೊಪ್ಪುಗಳನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತದೆ. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳು ಇರುತ್ತದೆ. ಇದು ಕಬ್ಬಿಣದಂಶ ಹಾಗೂ ಜೀವಸತ್ವಗಳ ಆಗರವಾಗಿದೆ. ಅಲ್ಲದೇ ಕೆಲವೊಂದು ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

* ಸಾಮಾನ್ಯವಾಗಿ ಉಂಟಾಗಬಹುದಾದ ದೃಷ್ಠಿದೋಷವನ್ನು ತಡೆಗಟ್ಟುವಲ್ಲಿ ಪಾಲಕ್‌ ಸೊಪ್ಪು ನೆರವಾಗುತ್ತದೆ.

* ಪಾಲಕ್‌ ಸೊಪ್ಪು ಫ್ರೋಲೆಟ್ ಅಂಶವನ್ನು ಹೊಂದಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಇತರೆ ಹೃದಯ ಸಂಬಂಧಿ ಖಾಯಿಲೆಗಳನ್ನು ನಿವಾರಿಸುತ್ತದೆ.

* ಪಾಲಕ್‌ ಸೇವನೆಯು ಮೊಡವೆಗಳನ್ನು ಹೋಗಲಾಡಿಸುವುದಲ್ಲದೇ ಮುಖದಲ್ಲಿ ಬೇಗನೇ ನೆರಿಗೆ ಮೂಡದಂತೆ ಕಾಪಾಡುತ್ತದೆ.

* ಮೆದುಳಿನ ನರಕೋಶಗಳ ಅಭಿವೃದ್ಧಿಗೆ ಸಹಾಯಕವಾಗಬಲ್ಲ ಪೋಷಕಾಂಶಗಳು ಪಾಲಕ್‌ ಸೊಪ್ಪಿನಲ್ಲಿರುವುದರಿಂದ ಅದರ ಸೇವನೆಯು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲದು.

* ದಿನನಿತ್ಯ ಪಾಲಕ್‌ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದಂಶದಿಂದಾಗಿ ನಮ್ಮ ರಕ್ತಕಣಗಳು ವೃದ್ಧಿಯಾಗಿ ರಕ್ತಹೀನತೆಯನ್ನು ದೂರವಿಡಬಹುದು.

* ಬಿಸಿಲಿನ ತಾಪದಿಂದಾಗಿ ಮಂಕಾಗಿರುವ ಚರ್ಮಕ್ಕೆ ಸಹಜವರ್ಣ ಪಡೆಯಲು ಪಾಲಕ್‌ ನೆರವಾಗುತ್ತದೆ.

* ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಕಣಗಳನ್ನು ನಾಶಮಾಡಬಲ್ಲ ಶಕ್ತಿ ಪಾಲಕ್‌ನಲ್ಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...