ಹೃದಯ ಸಮಸ್ಯೆ, ಕ್ಯಾನ್ಸರ್, ಅಕಾಲಿಕ ಮರಣ ಹೀಗೆ ಎಲ್ಲಾ ರೋಗಗಳಿಂದ ದೂರವಿರಬೇಕು ಅಂದ್ರೆ ಪ್ರತಿದಿನ 20 ಗ್ರಾಂನಷ್ಟು ನಟ್ಸ್ ತಿನ್ನಿ.
ಪ್ರತಿ ದಿನ ಇದನ್ನು ತಿನ್ನುವುದರಿಂದ ಹೃದಯದ ತೊಂದರೆ ಶೇ.30 ರಷ್ಟು ಕಡಿಮೆಯಾಗುತ್ತದೆ. ಕ್ಯಾನ್ಸರ್ ರೋಗ ಬರುವ ಸಾಧ್ಯತೆಯನ್ನು ಕೂಡ ಇದು ಶೇ.15ರಷ್ಟು ಕಡಿಮೆ ಮಾಡುತ್ತದೆ. ಅಕಾಲಿಕ ಮರಣದ ಸಾಧ್ಯತೆ ಶೇ.22ರಷ್ಟು ಕಡಿಮೆಯಾಗುತ್ತದೆ. ನಟ್ಸ್ ಸೇವನೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಸಕ್ಕರೆ ಖಾಯಿಲೆಯ ಅಪಾಯ ಕೂಡ ಶೇ.40ರಷ್ಟು ಕಡಿಮೆಯಾಗುತ್ತದೆ.
ನಟ್ಸ್ ಆರೋಗ್ಯದ ಸಂಗಾತಿ ಅನ್ನೋ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಅವುಗಳಲ್ಲಿ ಹೈ ಫೈಬರ್, ಮೆಗ್ನೀಶಿಯಂ ಮತ್ತು ಅಪರ್ಯಾಪ್ತ ಕೊಬ್ಬುಗಳಿದ್ದು ಅವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ.
ವಾಲ್ನಟ್ಸ್ ಮತ್ತು ಪೆಕನ್ ನಲ್ಲಿ ಆ್ಯಂಟಿಒಕ್ಸಿಡೆಂಟ್ಸ್ ಹಾಗೂ ಒಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವ ಅಂಶಗಳಿವೆ. ಹಾಗಾಗಿ ಅವುಗಳ ಸೇವನೆಯಿಂದ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು. ನಟ್ಸ್ ನಲ್ಲಿ ಕೊಬ್ಬಿನಂಶ ಹೆಚ್ಚಾಗಿದ್ರೂ ಫೈಬರ್ ಹಾಗೂ ಪ್ರೋಟೀನ್ ಕೂಡ ಅಧಿಕವಾಗಿರುವುದರಿಂದ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು.