ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಆರೋಗ್ಯವಾಗಿರಲು ಪ್ರಯತ್ನಿಸ್ತಾರೆ.
ಆದ್ರೆ ಸಮಯದ ಅಭಾವ ಹಾಗೂ ಕೆಲಸದ ಒತ್ತಡದಿಂದಾಗಿ ಪ್ರತಿ ದಿನ ವ್ಯಾಯಾಮ, ಆಹಾರ ಪದ್ಧತಿಯನ್ನು ಅನುಸರಿಸುವುದು ಕಷ್ಟ. ದೇಹ ಫಿಟ್ ಆಗಿರಲು ಅನೇಕರು ಹಣ್ಣುಗಳನ್ನು ತಿನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗುವುದಿಲ್ಲ. ಕೆಲಸ, ಮಕ್ಕಳು, ಅಡುಗೆಯಲ್ಲಿ ಬ್ಯುಸಿಯಾಗಿರುವ ಅವರು ಆರೋಗ್ಯದ ಬಗ್ಗೆ ಲಕ್ಷ್ಯ ನೀಡುವುದಿಲ್ಲ.
ಇಂತ ಮಹಿಳೆಯರು ದಿನಕ್ಕೊಂದರಂತೆ ಬಾಳೆ ಹಣ್ಣು ತಿಂದರೆ ಸಾಕು. ಬಾಳೆಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಬಾಳೆಹಣ್ಣು ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಆದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು. ಉಪಹಾರದ ನಂತ್ರವೇ ಬಾಳೆಹಣ್ಣು ತಿನ್ನಬೇಕು.
ಬಾಳೆಹಣ್ಣು ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಗರ್ಭಿಣಿಯರು ಬಾಳೆಹಣ್ಣನ್ನು ಅವಶ್ಯವಾಗಿ ತಿನ್ನಬೇಕು. ಬಾಳೆಹಣ್ಣಿನಲ್ಲಿರುವ ಫೋಲಿಕ್ ಆಮ್ಲ ತಾಯಿ ಹಾಗೂ ಮಕ್ಕಳಿಬ್ಬರಿಗೂ ಒಳ್ಳೆಯದು.
ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ 6 ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಶಕ್ತಿ ಹಾಗೂ ತಲೆ ನೋವಿನ ಸಮಸ್ಯೆ ಇದ್ದರೆ ಬಾಳೆಹಣ್ಣು ತಿನ್ನಲು ಶುರುಮಾಡಿ.
ಮುಟ್ಟಿನ ಸಮಸ್ಯೆಗೂ ಬಾಳೆಹಣ್ಣು ಹೇಳಿ ಮಾಡಿಸಿದ ಔಷಧಿ.
ಬೊಜ್ಜು ಕಡಿಮೆ ಮಾಡಲು ಬಯಸುತ್ತಿದ್ದರೆ ಬಾಳೆಹಣ್ಣು ನಿಮಗೆ ಸಹಕಾರಿ.
ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ ಅಂಶ ಜಾಸ್ತಿ ಇದ್ದು, ಇದು ಮೂಳೆಗಳನ್ನು ಬಲಗೊಳಿಸುತ್ತದೆ.