ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೋನ್ ಇರೋದು ಮಾಮೂಲಿ. ಈ ಸ್ಮಾರ್ಟ್ಫೋನ್ ಸಹಾಯದಿಂದ ಗೂಗಲ್ ಮೂಲಕ ನೀವು ತಿಂಗಳಿಗೆ 50 ಸಾವಿರ ರೂಪಾಯಿವರೆಗೆ ಗಳಿಸಬಹುದು.
ಗೂಗಲ್ ಒಪಿನಿಯನ್ ರಿವಾರ್ಡ್ಸ್ ಮೂಲಕ ನೀವು ಹಣ ಗಳಿಸಬಹುದು. ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಚಲನಚಿತ್ರ ಬಾಡಿಗೆ ತೆಗೆದುಕೊಳ್ಳುವುದು ಅಥವಾ ನೆಚ್ಚಿನ ಆಟದ ಅಪ್ಲಿಕೇಶನ್‌ನಲ್ಲಿ ಖರೀದಿಸಬಹುದು. ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅದ್ರ ಮೂಲಕವೂ ನೀವು ಹಣ ಗಳಿಸಬಹುದು.
Google Opinion Rewards ನಲ್ಲಿ ಸುಲಭವಾಗಿ ಹಣ ಸಂಪಾದಿಸಬಹುದು. ಗೂಗಲ್ ವಿವಿಧ ವಿಷಯಗಳ ಬಗ್ಗೆ ಸಮೀಕ್ಷೆಗಳನ್ನು ನಡೆಸುತ್ತದೆ. ಈ ಸಮೀಕ್ಷೆಗಳಿಗೆ ಪಾಲ್ಗೊಳ್ಳಬೇಕು. ಮೊದಲು ಗೂಗಲ್ ನ ಈ ವೈಶಿಷ್ಟ್ಯವನ್ನು ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಬೇಕು. ಸಮೀಕ್ಷೆಗೆ ಸೇರಿ, ಪ್ರತಿ ದಿನ 50 ರಿಂದ 500 ರೂಪಾಯಿಗಳನ್ನು ಪಡೆಯಬಹುದು. ಗಳಿಸುವ ಈ ವಿಧಾನವು ಆ ಸಮೀಕ್ಷೆಯನ್ನು ಆಧರಿಸಿದೆ. ಸಮೀಕ್ಷೆಯ ಹಣವನ್ನು ಗೂಗಲ್ ರಿವಾರ್ಡ್ ಪಾಯಿಂಟ್‌ಗಳಾಗಿ ಪರಿವರ್ತಿಸಿದ್ರೆ, ಆನ್‌ಲೈನ್ ಶಾಪಿಂಗ್ ಗೆ ಇದನ್ನು ಬಳಸಬಹುದು.
ಐಪೋಲ್ ಮೂಲಕವೂ ಹಣ ಗಳಿಸಬಹುದು. ಇದು ಇಂಕ್ ಕಾರ್ಪೊರೇಶನ್ ಸ್ಮಾರ್ಟ್ಫೋನ್ ವೈಶಿಷ್ಟ್ಯವಾಗಿದೆ. ಇದರ ಮೂಲಕವೂ ಹೆಚ್ಚುವರಿ ಹಣ ಸಂಪಾದಿಸಬಹುದು. ಇದರಲ್ಲಿ ಗೂಗಲ್ ಸರ್ವೆಗಿಂತ ಹೆಚ್ಚಿನ ಹಣವನ್ನು ಸಂಪಾದಿಸಬಹುದು. ತಿಂಗಳಿಗೆ 50 ಸಮೀಕ್ಷೆಗಳನ್ನು ಮಾಡಿದ್ದರೆ ನಿಮ್ಮ ಗಳಿಕೆ 5 ಸಾವಿರದಿಂದ 50 ಸಾವಿರ ರೂಪಾಯಿಗಳಾಗಿರಬಹುದು. ಆದಾಗ್ಯೂ, ಇದರಲ್ಲಿ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಇಲ್ಲಿನ ಹಣವನ್ನು ಪೇಪಾಲ್ ಖಾತೆ ಅಥವಾ ಅಮೆಜಾನ್ ಐಟ್ಯೂನ್ಸ್ ಖಾತೆಯ ಮೂಲಕ ಪಡೆಯುತ್ತೀರಿ.