alex Certify ಸುಲಭವಾಗಿ ಮಾಡಿ ಸಂಡೆ ಸ್ಪೆಷಲ್ ಮೊಟ್ಟೆ ಬೋಂಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ಸಂಡೆ ಸ್ಪೆಷಲ್ ಮೊಟ್ಟೆ ಬೋಂಡಾ

ರಜಾ ದಿನ ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರಿಗೆ ಬಾಯಿ ಚಪ್ಪರಿಸಲು ಏನಾದ್ರೂ ಬೇಕು ಎನ್ನಿಸುತ್ತೆ. ಅಂತವರಿಗೆ ಹೇಳಿ ಮಾಡಿಸಿದ ರೆಸಿಪಿ ಮೊಟ್ಟೆ ಬೋಂಡಾ. ಇದನ್ನು ಮಾಡುವುದು ಸುಲಭ. ಕೇವಲ 10 ನಿಮಿಷದಲ್ಲಿ ಎಗ್ ಬೋಂಡಾ ಸಿದ್ಧವಾಗುತ್ತೆ.

ಎಗ್ ಬೋಂಡಾ ಮಾಡಲು ಬೇಕಾಗುವ ಪದಾರ್ಥ :

ಆರು ಬೇಯಿಸಿದ ಮೊಟ್ಟೆ

ಅರ್ಧ ಚಮಚ ಮೆಣಸಿನ ಪುಡಿ

ಅರ್ಧ ಲೋಟ ಕಡಲೆ ಹಿಟ್ಟು

ಕಾಲು ಚಮಚ ಜೀರಿಗೆ ಪುಡಿ

ಅರ್ಧ ಲೋಟ ಮೊಸರು

ಅರ್ಧ ಲೋಟ ಬಿಸಿ ನೀರು

ಕರಿಯಲು ತುಪ್ಪ

ರುಚಿಗೆ ತಕ್ಕಷ್ಟು ಉಪ್ಪು

ಎಗ್ ಬೋಂಡಾ ಮಾಡುವ ವಿಧಾನ :

ಬೇಯಿಸಿದ ಮೊಟ್ಟೆಯನ್ನು ಬಿಡಿಸಿಕೊಂಡು ಮಧ್ಯ ಕತ್ತರಿಸಿಕೊಳ್ಳಿ. ಅದನ್ನು ಬಿಸಿ ಮಾಡಿದ ತುಪ್ಪದಲ್ಲಿ ಅದ್ದಿ ಮುಚ್ಚಿಡಿ.

ಇನ್ನೊಂದು ಪಾತ್ರೆಗೆ ಕಡಲೆ ಹಿಟ್ಟು, ಬಿಸಿ ನೀರು, ಮೊಸರು ಸೇರಿಸಿ ಕಲಸಿಕೊಳ್ಳಿ. ಅದಕ್ಕೆ ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪನ್ನು ಹಾಕಿ ಕಲಸಿ. ಬಾಣೆಲೆಗೆ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ನಂತ್ರ ಮೊಟ್ಟೆ ಚೂರನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಬಾಣಲೆಗೆ ಬಿಡಿ. ಕೆಂಪಗಾಗುವವರೆಗೆ ಕರಿದು ತೆಗೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...