ಹೀರೆಕಾಯಿ ಸಾಂಬಾರು, ಪಲ್ಯ ಮಾಡುತ್ತೇವೆ. ಇದರಿಂದ ರುಚಿಕರವಾದ ಚಟ್ನಿ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ತುಂಬಾ ಸುಲಭವಿದೆ.
ಬೇಕಾಗುವ ಸಾಮಗ್ರಿಗಳು:
ಹೀರೆಕಾಯಿ – 2, ಹಸಿಮೆಣಸು – 3, 8 – ಕರಿಬೇವು, 1 ಟೀ ಸ್ಪೂನ್ – ಹುಣಸೆಹಣ್ಣಿನ ರಸ, 1 ಟೇಬಲ್ ಸ್ಪೂನ್ – ಕಡಲೆಬೇಳೆ, ½ ಟೀ ಸ್ಪೂನ್ – ಸಾಸಿವೆ, ½ ಟೀ ಸ್ಪೂನ್ – ಮೆಂತೆಕಾಳು, 3 – ಒಣಮೆಣಸು, ¼ ಟೀ ಸ್ಪೂನ್ – ಅರಿಶಿನ, 2 ಟೇಬಲ್ ಸ್ಪೂನ್ – ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಬೇಕಿದ್ದರೆ ಅದರ ಮೇಲಿದ್ದ ನಾರನ್ನು ತೆಗೆದುಕೊಳ್ಳಿ. ನಂತರ ಇದನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಕಡಲೆಬೇಳೆ ಸೇರಿಸಿ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಕತ್ತರಿಸಿದ ಹೀರೆಕಾಯಿ, ಕರಿಬೇವು, ಹಸಿಮೆಣಸು, ಅರಿಸಿನ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಪ್ಲೇಟ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಇದು ಮೆತ್ತಗಾದ ಮೇಲೆ ಗ್ಯಾಸ್ ಆಫ್ ಮಾಡಿ. ನಂತರ ಇನ್ನೊಂದು ಪ್ಯಾನ್ ಗೆ ಸಾಸಿವೆ, ಒಣಮೆಣಸು ಹಾಕಿ ಹುರಿದುಕೊಳ್ಳಿ. ಎಣ್ಣೆ ಸೇರಿಸಬೇಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಇದಕ್ಕೆ ಹೀರೆಕಾಯಿ ಮಿಶ್ರಣ , ಸಾಸಿವೆ, ಒಣಮೆಣಸು, ಕಡಲೆಬೇಳೆ ಎಲ್ಲವನ್ನು ಹಾಕಿಕೊಂಡು ನಯವಾಗಿ ರುಬ್ಬಿಕೊಳ್ಳಿ