ಬೇಕಾಗುವ ಸಾಮಗ್ರಿ :
ಸಕ್ಕರೆ – 4 ಟೇಬಲ್ ಸ್ಪೂನ್, ಬೆಣ್ಣೆ – 2 ಟೇಬಲ್ ಚಮಚ, ಗೋಡಂಬಿ – 1ಕಪ್, ವಿಪ್ಪಿಂಗ್ ಕ್ರೀಂ – 500 ಎಂ ಎಲ್
ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಸಕ್ಕರೆಯನ್ನ ಹಾಕಿಕೊಂಡು ಸಣ್ಣ ಉರಿಯಲ್ಲಿ ಪೂರ್ತಿ ಕರಗುವರೆಗೂ ಕಾಯಿಸಿಕೊಳ್ಳಿ. ಇದು ಸಂಪೂರ್ಣ ಕರಗಿದ ಬಳಿಕ ಬೆಣ್ಣೆಯನ್ನ ಹಾಕಿ. ಆಮೇಲೆ ಗೋಡಂಬಿ ಚೂರನ್ನ ಹಾಕಿ ಕಲಸಿ. ಗೋಡಂಬಿಗೆ ಸಕ್ಕರೆ ಮಿಶ್ರಣ ತಾಕಿದ ಬಳಿಕ ಒಂದು ಪಾರ್ಚ್ಮೆಂಟ್ ಪೇಪರ್ನ ಮೇಲೆ ಇದನ್ನ ಹರಡಿಕೊಳ್ಳಿ. ಇದು ಗಟ್ಟಿಯಾದ ಬಳಿಕ ಪಾರ್ಚ್ಮೆಂಟ್ ಪೇಪರ್ನಿಂದ ಅದರ ಮೇಲ್ಭಾಗವನ್ನ ಮುಚ್ಚಿ ಅದನ್ನ ಲಟ್ಟಣಿಗೆಯ ಸಹಾಯದಿಂದ ಚೂರು ಚೂರು ಮಾಡಿ.
ಇದೀಗ ಇನ್ನೊಂದು ಪಾತ್ರೆಯಲ್ಲಿ ವಿಪ್ಪಿಂಗ್ ಕ್ರೀಂ ಹಾಕಿಕೊಳ್ಳಿ. ಇದನ್ನ ನಾಲ್ಕು ನಿಮಿಷಗಳ ಕಾಲ ಬ್ಲೆಂಡ್ ಮಾಡಿಕೊಳ್ಳಿ. ಇದಾದ ಬಳಿಕ ಸಕ್ಕರೆ ಪುಡಿ ಹಾಕಿ ಕೊಳ್ಳಿ. ಈ ಮಿಶ್ರಣಕ್ಕೆ ಗೋಡಂಬಿ ಮಿಶ್ರಣ ಹಾಕಿ ಬ್ಲೆಂಡ್ ಮಾಡಿಕೊಳ್ಳಿ.
ಈ ಮಿಶ್ರಣವನ್ನ ಪಾತ್ರೆಯಲ್ಲಿ ಹಾಕಿ . ಅದಕ್ಕೆ ಮುಚ್ಚಳವನ್ನ ಹಾಕಿ ಫ್ರೀಜರ್ನಲ್ಲಿ 7 ರಿಂದ 8 ಗಂಟೆಗಳ ಕಾಲ ಇಡಿ. ಹೀಗೆ ಇದನ್ನ ಬೌಲ್ಗೆ ಹಾಕಿ ಸರ್ವ್ ಮಾಡಿ.