ದಿನೇ ದಿನೇ ತೂಕ ಜಾಸ್ತಿಯಾಗ್ತಾ ಇದೆ. ಫಿಜಾ, ಬೇಕರಿ ತಿಂಡಿಗೆ ಎಷ್ಟೇ ಕಡಿವಾಣ ಹಾಕಬೇಕು ಎಂದರೂ ಬಾಯಿ ಕೇಳಲ್ಲ. ಪ್ರತಿದಿನ ವ್ಯಾಯಾಮ ಮಾಡಲು ಸಮಯ ಇಲ್ಲ. ಹೀಗಂತ ಹೇಳೋರಿಗೆ ಇಲ್ಲಿದೆ ಟಿಪ್ಸ್.
ವ್ಯಾಯಾಮವಿಲ್ಲದೇ ತೂಕ ಕಡಿಮೆ ಮಾಡಲು ಆಲಿವ್ ಆಯಿಲ್ ಸಹಕಾರಿ. ಕೊಬ್ಬಿನ ಅಂಶವನ್ನು ಇದು ಕಡಿಮೆ ಮಾಡುತ್ತದೆ.
ನಿಂಬೆ ರಸ ಕುಡಿದು ದಿನ ಆರಂಭಿಸುವುದು ಉತ್ತಮ. ಇದು ಚಯಾಪಚಯಕ್ಕೆ ಸಹಕಾರಿ. ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರಿಗೆ ನಿಂಬೆ ರಸ ಬೆರಸಿ ಕುಡಿಯುತ್ತ ಬರಬೇಕು. ಇದು ಯಕೃತ್ತು ಬಲಪಡಿಸುತ್ತದೆ. ನಿಮ್ಮ ಸೊಂಟದ ಸುತ್ತ ಕೊಬ್ಬು ಕರಗಲು ಸಹಕಾರಿ.
ಕಾಳು ಮೆಣಸು ಕೊಬ್ಬು ಕರಗಿಸುತ್ತದೆ. ಊಟಕ್ಕೆ ಇದನ್ನು ಬಳಸುವುದರಿಂದ ಹಸಿವು ಕಡಿಮೆಯಾಗುತ್ತದೆ.
ತೂಕ ಕಡಿಮೆ ಮಾಡಲು ಬಾದಾಮಿ ಉತ್ತಮ. ಕೊಬ್ಬಿನ ಅಂಶ ಕಡಿಮೆ ಮಾಡಿ, ಬೊಜ್ಜಿನ ವಿರುದ್ಧ ಹೋರಾಡುತ್ತದೆ.
ಚಯಾಪಚಯಕ್ಕೆ ಗ್ರೀನ್ ಟೀ ಸಹಕಾರಿ. ಒಂದು ಕಪ್ ಸಾಮಾನ್ಯ ಟೀ ಗಿಂತ ಗ್ರೀನ್ ಟೀ ನೂರು ಪಟ್ಟು ಪ್ರಯೋಜನಕಾರಿ.
ತೂಕ ಕಡಿಮೆ ಮಾಡಿಕೊಳ್ಳಲು ಸೌತೆಕಾಯಿ ಅತ್ಯಂತ ಪರಿಣಾಮಕಾರಿ ತರಕಾರಿ. ಸೌತೆಕಾಯಿ ಪರಿಪೂರ್ಣ ಕೊಬ್ಬು ತೆಗೆದು, ದೇಹದಲ್ಲಿ ನೀರಿನ ಅಂಶ ಹೆಚ್ಚಿಸುತ್ತದೆ.
ಬೆಳಗಿನ ಉಪಹಾರಕ್ಕೆ ಓಟ್ಸ್ ಉತ್ತಮ. ಬಹಳ ಸಮಯದವರೆಗೆ ಇದು ಹಸಿವನ್ನು ಇಂಗಿಸುತ್ತದೆ.
ಟೊಮ್ಯಾಟೋ ದೇಹದಲ್ಲಿ ನೀರಿನ ಅಂಶ ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಗೂ ಇದು ಸಹಕಾರಿ. ತೂಕವನ್ನು ಕಡಿಮೆ ಮಾಡುವ ಟೋಮ್ಯಾಟೋ ಪ್ರೋಟೀನ್ ಒದಗಿಸುತ್ತದೆ.
ಅವರೆ, ಕೊಬ್ಬನ್ನು ಕರಗಿಸಿ, ನಾರಿನ ಅಂಶವನ್ನು ಜಾಸ್ತಿ ಮಾಡುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.