ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ.
ಈಗ ಡೆಬಿಟ್, ಕ್ರೆಡಿಟ್ ಬಳಸೋದು ಮಾಮೂಲಿ. ಶಾಪಿಂಗ್ ಗೆ ಹೋದಾಗ ನಾವು ಕಾರ್ಡ್ ನಲ್ಲೇ ಹಣ ತುಂಬುತ್ತೇವೆ. ಆ ತಕ್ಷಣ ಬ್ಯಾಂಕ್ ನಿಂದ ಮೊಬೈಲ್ ಗೆ ಎಸ್ಎಂಎಸ್ ಬರುತ್ತೆ. ಹಾಗಾಗಿ ಎರಡೆರಡು ಬಿಲ್ ಪಡೆಯುವ ಅವಶ್ಯಕತೆ ಇಲ್ಲ. ಮುಂದಿನ ಬಾರಿ ಶಾಪಿಂಗ್ ಗೆ ಹೋದಾಗ ಒಂದೇ ರಶೀದಿಯನ್ನು ಕೇಳಿ ಪಡೆಯಿರಿ.
ಇದೊಂದೇ ಅಲ್ಲ, ಎಟಿಎಂನಲ್ಲಿ ಹಣ ಪಡೆಯುವಾಗಲೂ ಇದೇ ನಿಯಮ ಅನುಸರಿಸಿ. ಹಣ ಪಡೆದ ನಂತರ ಬ್ಯಾಂಕ್ ನಿಂದ ಬ್ಯಾಲೆನ್ಸ್ ಎಷ್ಟಿದೆ ಎಂಬುದರ ಮಾಹಿತಿ ಮೊಬೈಲ್ ಗೆ ಬರುತ್ತದೆ. ಎಟಿಎಂ ಯಂತ್ರದಲ್ಲೂ ಇದು ಕಾಣುತ್ತದೆ. ಇಷ್ಟಾಗಿಯೂ ಪೇಪರ್ ಅವಶ್ಯಕತೆ ಇಲ್ಲ.
ಅವಶ್ಯಕತೆ ಇದ್ದರೆ ಮಾತ್ರ ಪ್ರಿಂಟ್ ಮೊರೆ ಹೋಗಿ. ಈಗ ವಿಮಾನ, ರೈಲ್ವೆ ಟಿಕೆಟ್ ಗಳೆಲ್ಲ ಇ-ಟಿಕೆಟ್ ಗಳಾಗಿವೆ. ಹಾಗಾಗಿ ಪ್ರಿಂಟ್ ಅವಶ್ಯಕತೆ ಇಲ್ಲ.
ದೊಡ್ಡ ಅಕ್ಷರ ಬರುವಂತೆ ಪ್ರಿಂಟ್ ತೆಗೆದು ಪೇಪರ್ ಹಾಳು ಮಾಡಬೇಡಿ. ನಿಮಗೆ ಬೇಕಾಗುವ, ಚಿಕ್ಕ ಫಾಂಟ್ ಬಳಸಿ, ನಂತರ ಪ್ರಿಂಟ್ ತೆಗೆಯಿರಿ.
ಒಂದು ವೇಳೆ ಪ್ರಿಂಟ್ ತೆಗೆದಿದ್ದರೆ, ಅದರ ಮತ್ತೊಂದು ಭಾಗವನ್ನು ಇತರ ಉಪಯೋಗಕ್ಕೆ ಬಳಸಿಕೊಳ್ಳಿ. ಅಲ್ಲದೆ ಲೆಟರ್, ಬಿಲ್ ಹಿಂಭಾಗವನ್ನು ಸದುಪಯೋಗಪಡಿಸಿಕೊಳ್ಳಿ.
ಕಿರಾಣಿ ಅಂಗಡಿಗೆ ಹೋಗುವಾಗ ಸಾಮಾನುಗಳ ಪಟ್ಟಿ ಮಾಡಲು ಮೊಬೈಲ್ ಬಳಸಿ. ಮೊಬೈಲ್ ಸದಾ ನಿಮ್ಮ ಜೊತೆಯಲ್ಲೇ ಇರುವುದರಿಂದ ಕಾಗದ ಹಾಳು ಮಾಡುವುದಕ್ಕಿಂತ ಮೊಬೈಲ್ ನಲ್ಲೇ ಲಿಸ್ಟ್ ಮಾಡುವುದು ಒಳಿತು.
ನಿಯತಕಾಲಿಕ ಅಥವಾ ಇತರ ಪೇಪರ್ ಗಳನ್ನು ಬಳಸಿ, ಕವರ್ ಮಾಡಿ ಬಳಸಬಹುದು. ಅಲ್ಲದೆ ಅಲಂಕಾರಿಕ ಹೂ ಮಾಡಿ, ಮನೆಯ ಅಂದ ಹೆಚ್ಚಿಸಬಹುದು.
ನ್ಯಾಪ್ ಕಿನ್ ಬಳಸುವ ಬದಲು ಮನೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಬಟ್ಟೆ ಬಳಸಿ. ಕಾಗದ ಉಳಿಯುವುದಲ್ಲದೇ, ಬಟ್ಟೆಯನ್ನು ಮರು ಬಳಕೆ ಮಾಡಬಹುದು.