ಕಣ್ಣಿನ ಆಯಾಸ ತುಂಬಾ ಸಾಮಾನ್ಯ ಸಮಸ್ಯೆ. ಗಂಟೆಗಟ್ಟಲೆ ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಸ್ಕ್ರೀನ್‌ಗಳನ್ನು ನೋಡುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಕಣ್ಣುಗಳಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಬೇಕು.
ಕಣ್ಣಿನ ಉರಿ ಮತ್ತು ಆಯಾಸ ನಮ್ಮ ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳಲ್ಲಿ 20-20-20 ನಿಯಮವನ್ನು ಅನುಸರಿಸಿ. ಇದರಿಂದ ಕಣ್ಣುಗಳಿಗೆ ಸಂಬಂಧಿಸಿದ ತೊಂದರೆ ನಿವಾರಣೆಯಾಗುತ್ತದೆ.
ಕಣ್ಣಿನ ಒತ್ತಡದ ಲಕ್ಷಣಗಳು
ತಲೆನೋವು
ಬೆಳಕು ನೋಡಿದಾಗ ಚುಚ್ಚಿದಂತಾಗುವುದು
ದೃಷ್ಟಿ ಕೇಂದ್ರೀಕರಿಸುವಲ್ಲಿ ತೊಂದರೆ
ದೀರ್ಘಕಾಲದವರೆಗೆ ಕಣ್ಣು ತೆರೆದಿಡಲು ಕಷ್ಟ
ಕುತ್ತಿಗೆ ಮತ್ತು ಭುಜದ ನೋವು
ಏನಿದು 20-20-20 ನಿಯಮ ?
ಇದು ಒಂದು ರೀತಿಯ ಕಣ್ಣಿನ ವ್ಯಾಯಾಮ. ಸ್ಕ್ರೀನ್‌ಗಳನ್ನು ನೋಡುತ್ತ ಕೆಲಸ ಮಾಡುವ ಸಂದರ್ಭದಲ್ಲಿ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ 20 ಅಡಿ ದೂರದಲ್ಲಿ ಏನನ್ನಾದರೂ ನೋಡಬೇಕು.
20-20-20 ನಿಯಮ ಎಷ್ಟು ಪರಿಣಾಮಕಾರಿ ?
ಕಂಪ್ಯೂಟರ್ ಬಳಸುವಾಗ ಈ ರೀತಿ ಮಾಡುವುದರಿಂದ ಕಣ್ಣಿನ ಒತ್ತಡ, ಕಣ್ಣುಗಳಲ್ಲಿ ನೀರು ಬರುವುದು, ಆಯಾಸ ಇವೆಲ್ಲವೂ ಪರಿಹಾರವಾಗುತ್ತವೆ. ಅಷ್ಟೇ ಅಲ್ಲ ಈ ರೀತಿ ಮಾಡುವವರು ಕಂಪ್ಯೂಟರ್ ವಿಷನ್ ಸಿಂಡ್ರೋಮ್‌ನ ಕಡಿಮೆ ಲಕ್ಷಣಗಳನ್ನು ಹೊಂದಿರುತ್ತಾರೆ.
ಆಗಾಗ ಕಣ್ಣುಗಳನ್ನು ಮಿಟುಕಿಸುವುದು ಮತ್ತು ನಡೆಯುವುದರಿಂದ ಕಣ್ಣುಗಳಲ್ಲಿನ ಶುಷ್ಕತೆ, ಬೆನ್ನು-ಭುಜದ ನೋವಿನಂತಹ ಕಣ್ಣಿನ ಆಯಾಸದ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಆಸನದಿಂದ ಎದ್ದು ಒಂದರಿಂದ ಎರಡು ಗಂಟೆಗಳಿಗೊಮ್ಮೆ ವಾಕಿಂಗ್ ಮಾಡಬೇಕು.
ಕಣ್ಣಿನ ಒತ್ತಡವನ್ನು ತಡೆಯುವುದು ಹೇಗೆ ?
ಸ್ಕ್ರೀನ್ ಟೈಮ್ ಕಡಿಮೆ ಮಾಡಿ
ಆಂಟಿ-ಗ್ಲೇರ್ ಗ್ಲಾಸ್ ಬಳಸಿ
ಕತ್ತಲೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಬಳಸಬೇಡಿ
ಬಹುಕಾರ್ಯ ಮಾಡುವಾಗ ಕಣ್ಣುಗಳನ್ನು ಹೆಚ್ಚು ಚಲಿಸಬೇಡಿ
ತೇವಾಂಶಕ್ಕಾಗಿ ಐಡ್ರಾಪ್ ಬಳಸಿ