
ನಿದ್ರೆ ಮಾಡುವಾಗ ಅನೇಕರು ಕಸನು ಕಾಣುತ್ತಾರೆ. ಕೆಲ ಕನಸುಗಳು ಸಂತೋಷ ನೀಡಿದ್ರೆ ಮತ್ತೆ ಕೆಲವು ಭಯ ಹುಟ್ಟಿಸುತ್ತವೆ. ಅನೇಕರಿಗೆ ರಾತ್ರಿ ಬೀಳುವ ಕೆಟ್ಟ ಕನಸುಗಳು ಬೆಳಿಗ್ಗೆ ಕೂಡ ಕಾಡುತ್ತಿರುತ್ತದೆ. ಅಗ್ನಿ ಪುರಾಣದಲ್ಲಿ ಇದಕ್ಕೆ ಪರಿಹಾರ ಹೇಳಲಾಗಿದೆ.
ಕನಸಿನಲ್ಲಿ ಹಾವು ಪದೇ ಪದೇ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದ್ದರೆ, ಶಿವ ದೇವಾಲಯದಲ್ಲಿ ಪೂಜೆ ಮಾಡಿ, ಬೆಳ್ಳಿಯ ಹಾವನ್ನು ದಾನ ಮಾಡಿ.
ಮಹಾಮೃತ್ಯುಂಜಯ ಜಪ, ಕನಸುಗಳನ್ನು ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯಕಾರಿ. ಮತ್ತೆ ಮತ್ತೆ ಭಯಾನಕ ಕನಸುಗಳನ್ನು ಕಾಣುತ್ತಿದ್ದರೆ ಪ್ರತಿ ದಿನ ಮಹಾ ಮೃತ್ಯುಂಜಯ ಜಪ ಮಾಡಿ. ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.
ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ ದೀಪ ಹಚ್ಚಿ. ಇದು ಕೂಡ ಮನಸ್ಸನ್ನು ಶಾಂತವಾಗಿ ಮತ್ತು ಧನಾತ್ಮಕವಾಗಿರಿಸುತ್ತದೆ.
ಅಶುಭವಾದ ಕನಸು ಬಿದ್ದರೆ, ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆಯಿರಿ.
ಬೆಳಿಗ್ಗೆ ಸೂರ್ಯನಿಗೆ ನೀರನ್ನು ಅರ್ಪಿಸಿ. ಇದರಿಂದ ವ್ಯಕ್ತಿಯ ಮನಸ್ಸು ಮತ್ತು ಆಲೋಚನೆಗಳು ಸಕಾರಾತ್ಮಕವಾಗುತ್ತವೆ. ದುಃಸ್ವಪ್ನ ಬೀಳುವುದು ಕಡಿಮೆಯಾಗುತ್ತದೆ.