ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ, ವಾತಾವರಣದ ಮಾಲಿನ್ಯಗಳಿಂದ ಕೂದಲು ವಯಸ್ಸಾಗುವ ಮುನ್ನವೇ ಬೆಳ್ಳಗಾಗುತ್ತದೆ. ಹಾಗಾಗಿ ಕೆಲವರು ಈ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸಿ ಹಾನಿಗೊಳಿಸುತ್ತಾರೆ. ಅದರ ಬದಲು ಮನೆಯಲ್ಲಿಯೇ ಹೇರ್ ಕಲರ್ ತಯಾರಿಸಿ ಹಚ್ಚಿ.
ತೆಂಗಿನಕಾಯಿ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಕಬ್ಬಿಣದ ತವಾದ ಮೇಲೆ ಹಾಕಿ ಹುರಿಯಿರಿ. ಅದು ಕಪ್ಪು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ಅದು ತಣ್ಣಗಾದ ಮೇಲೆ ಅದನ್ನು ಪುಡಿ ಮಾಡಿ ಸೋಸಿ ಬಾಟಲಿನಲ್ಲಿ ಸ್ಟೋರ್ ಮಾಡಿ ಇಡಿ.
ಬಳಿಕ ½ ಚಮಚ ತೆಂಗಿನ ಸಿಪ್ಪೆ ಪುಡಿಗೆ 1 ಚಮಚ ಸಾಸಿವೆ ಎಣ್ಣೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಒಂದು ಗಂಟೆಯ ಬಳಿಕ ಶಾಂಪೂ ಬಳಸಿ ವಾಶ್ ಮಾಡಿ. ಇದರಿಂದ ಕೂದಲು ಕಲರ್ ಬರುವುದಲ್ಲದೇ ಹೊಳಪಿನಿಂದ ಕೂಡಿರುತ್ತದೆ.