ಪೂರ್ವ ಮಧ್ಯ ರೈಲ್ವೆ, ರೈಲ್ವೆ ನೇಮಕಾತಿ ಕೋಶ(RRC ECR) ವಿವಿಧ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 9, 2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಪೂರ್ವ ಕೇಂದ್ರ ರೈಲ್ವೆಯ ವಿವಿಧ ವಿಭಾಗಗಳು/ ಘಟಕಗಳಾದ ದಾನಪುರ ವಿಭಾಗ, ಧನ್‌ಬಾದ್ ವಿಭಾಗ, ಮುಘಲ್‌ಸರೈ ವಿಭಾಗ, ಸಮಸ್ತಿಪುರ್ ವಿಭಾಗಗಳಲ್ಲಿ ಪ್ಲಾಂಟ್, ಡಿಪೋ, ಮೆಕ್ಯಾನಿಕಲ್ ವರ್ಕ್‌ಶಾಪ್/ ಸಮಸ್ತಿಪುರ್ ಕ್ಯಾರೇಜ್ ರಿಪೇರಿ ಕಾರ್ಯಾಗಾರಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿವಿಧ ಟ್ರೇಡ್‌ಗಳಲ್ಲಿ 1,832 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಡ್ರೈವ್ ಕೈಗೊಳ್ಳಲಾಗಿದೆ.
ಫಿಟ್ಟರ್, ವೆಲ್ಡರ್, ಮೆಕ್ಯಾನಿಕ್ (ಡೀಸೆಲ್), AC ಮೆಕ್ಯಾನಿಕ್, ಫೋರ್ಜರ್ ಮತ್ತು ಹೀಟ್ ಟ್ರೀಟರ್, ಕಾರ್ಪೆಂಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಪೇಂಟರ್(ಸಾಮಾನ್ಯ), ಎಲೆಕ್ಟ್ರಿಷಿಯನ್, ವೈರ್‌ಮ್ಯಾನ್, ವೆಲ್ಡರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅಭ್ಯರ್ಥಿಗಳು ಖಾಲಿ ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಮತ್ತು ಇತರ ವಿವರಗಳಿಗಾಗಿ rrecr.gov.in, ವೆಬ್ ಸೈಟ್ ಪರಿಶೀಲಿಸಬಹುದು.
ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್ ಮತ್ತು ಸಂಬಂಧಿತ ಟ್ರೇಡ್ ನಲ್ಲಿ ITI ಯಿಂದ ಒಟ್ಟಾರೆಯಾಗಿ ಕನಿಷ್ಠ 50% ಅಂಕಗಳೊಂದಿಗೆ 10 ನೇ ತರಗತಿ ಅಥವಾ ಅದರ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅಭ್ಯರ್ಥಿಯು 15 ರಿಂದ 24 ವರ್ಷದೊಳಗಿನವರಾಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ ಸಡಿಲಿಕೆ ಇರುತ್ತದೆ.
ಆಸಕ್ತ ಅಭ್ಯರ್ಥಿಗಳು ಪೂರ್ವ ಮಧ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್ rrcer.gov.in ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಬೇರೆ ಯಾವುದೇ ವಿಧಾನದಿಂದ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.