ಹೆಚ್ಚಿನ ಮಸಾಲೆ ಯುಕ್ತ ಆಹಾರ ಸೇವಿಸುವುದರಿಂದ ಅಥವಾ ಕೆಲವಷ್ಟು ಔಷಧಗಳನ್ನು ನಿತ್ಯ ಸೇವಿಸುವುದರಿಂದ ಮಲಬದ್ಧತೆಯಂಥ ಸಮಸ್ಯೆಗಳು ಕಾಡುತ್ತವೆ. ಪ್ರತಿ ಬಾರಿ ವೈದ್ಯರ ಬಳಿ ಓಡುವ ಬದಲು ಈ ಕೆಳಗಿನ ಆಹಾರಗಳನ್ನು ಸೇವಿಸಿ ನಿಮ್ಮ ಸಮಸ್ಯೆ ನಿವಾರಿಸಿಕೊಳ್ಳಬಹುದು.
ಪ್ರತಿ ಬಾರಿ ಮಸಾಲೆಯುಕ್ತ ಆಹಾರ ತಿಂದ ಬಳಿಕ ಹೆಚ್ಚು ನೀರು ಕುಡಿಯಿರಿ. ಅಥವಾ ಹೆಚ್ಚಿನ ಪ್ರಮಾಣದ ದ್ರವಾಹಾರ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಮಲಬದ್ಧತೆ ನಿವಾರಣೆ ಆಗುತ್ತದೆ.
ಫೈಬರ್ ಯುಕ್ತ ಆಹಾರಗಳು ನಿಮ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ. ಗೋಧಿ, ರಾಗಿ ಜೊತೆ ಹೆಸರು ಬೇಳೆ, ಹಸಿರು ಸೊಪ್ಪುಗಳು ಹಾಗೂ ಮೂಸುಂಬಿಯನ್ನು ನಿತ್ಯ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ.
ತುಪ್ಪ, ತೆಂಗಿನೆಣ್ಣೆಯನ್ನು ಊಟದಲ್ಲಿ ಬಳಸಿಕೊಳ್ಳಿ. ಇವು ದೇಹದ ತೂಕ ಕಡಿಮೆ ಮಾಡುವುದು ಮಾತ್ರವಲ್ಲ ಜೀರ್ಣಕ್ರಿಯೆಯನ್ನೂ ಸಲೀಸಾಗಿಸುತ್ತದೆ.