ನವದೆಹಲಿ: ಸಲಲಿತ ಸುಲಭ ಜೀವನ ಸೂಚ್ಯಂಕದಲ್ಲಿ ವಾಸಕ್ಕೆ ಹೆಚ್ಚು ಯೋಗ್ಯವಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ರಾಜಧಾನಿ ದೆಹಲಿ 13 ನೇ ಸ್ಥಾನದಲ್ಲಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಸುಲಲಿತ ಜೀವನ ಸೂಚಂಕ ಪಟ್ಟಿ ಸಿದ್ಧಪಡಿಸಿದ್ದು, ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಪುಣೆ, ಅಹಮದಾಬಾದ್ ಗೆ ಮೂರನೇ ಸ್ಥಾನ, ಚೆನ್ನೈಗೆ 4 ಹಾಗೂ ಸೂರತ್ 5 ನೇ ಸ್ಥಾನ ಸಿಕ್ಕಿದೆ. ಈ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ 37 ನೇ ಸ್ಥಾನ ಪಡೆದುಕೊಂಡಿದೆ.
10 ಲಕ್ಷಕ್ಕಿಂತ ಕಡಿಮೆ ಜನರು ಇರುವ ನಗರಗಳ ಪಟ್ಟಿಯಲ್ಲಿ ದಾವಣಗೆರೆ, ಬೆಳಗಾವಿ, ಶಿವಮೊಗ್ಗ, ಮಂಗಳೂರು, ತುಮಕೂರು ನಗರಗಳು ಸ್ಥಾನ ಪಡೆದುಕೊಂಡಿವೆ. ಸುಲಲಿತ ಜೀವನ ಸೂಚ್ಯಂಕ ಆರ್ಥಿಕ ಸಾಮರ್ಥ್ಯ, ಜೀವನದ ಗುಣಮಟ್ಟ, ಸುಸ್ಥಿರತೆ, ನಾಗರಿಕ ಗ್ರಹಿಕೆ ಸಮೀಕ್ಷೆ ಮೊದಲಾದ ಅಂಶಗಳ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ.