ಖಜಕಿಸ್ತಾನದಲ್ಲಿ ಕಳೆದ ರಾತ್ರಿ ಭಾರತೀಯ ಕಾಲಮಾನ 10-31 ರ ಸುಮಾರಿಗೆ ಭಾರೀ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ. ಭೂಕಂಪದ ಪರಿಣಾಮ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ್ದು, ಭಯದಿಂದ ಜನತೆ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಜಮ್ಮು-ಕಾಶ್ಮೀರದ ಶ್ರೀನಗರದಿಂದ 450 ಕಿಮೀ ದೂರದಲ್ಲಿ 74 ಕಿಲೋಮೀಟರ್ ಆಳದೊಳಗೆ ಕಜಕಿಸ್ತಾನದ ಭೂಕಂಪನ ಸಂಭವಿಸಿದೆ. ಇದರ ತೀವ್ರತೆ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಿಗೂ ತಟ್ಟಿದೆ. ಆದರೆ ಯಾವುದೇ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ.
ನೋಡನೋಡುತ್ತಿದ್ದಂತೆಯೇ ಶಾರ್ಕ್ ಮರಿಗಳನ್ನ ನುಂಗಿ ನೀರು ಕುಡಿದ ಮೊಸಳೆ..!
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭೂಕಂಪನದ ಕುರಿತು ಟ್ವೀಟ್ ಮಾಡಿದ್ದು, ಯಾರಿಗೂ ಯಾವುದೇ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸಿದ್ದಾರೆ. ನವದೆಹಲಿ ಹಾಗೂ ಉತ್ತರ ಭಾರತದ ಜನತೆಗೆ ಭೂಕಂಪನದ ಅನುಭವವಾಗುತ್ತಿದ್ದಂತೆ ಹಲವರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.