
ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಬಹುತೇಕ ಕಡೆಗಳಲ್ಲಿ ಇಂದು ರಾತ್ರಿ ಲಘು ಭೂಕಂಪನವಾಗಿದೆ. ರಾತ್ರಿ 10.20 ರ ಸುಮಾರಿಗೆ ಭಾರೀ ಶಬ್ದದೊಂದಿಗೆ ಲಘು ಕಂಪನವಾಗಿದ್ದು, ಭಯಭೀತರಾದ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಕೆಲ ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವವಾಗಿದ್ದು, ಮನೆಯಿಂದ ಹೊರಗೆ ಬಂದ ಜನ ತಮಗೆ ಆದ ಅನುಭವ ಹೇಳಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ, ಎನ್.ಆರ್. ಪುರ, ಶಿವಮೊಗ್ಗ ಜಿಲ್ಲೆ ಭದ್ರಾವತಿ, ಶಿವಮೊಗ್ಗ ಸಾಗರ, ತೀರ್ಥಹಳ್ಳಿ, ಆಯನೂರು ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಶಬ್ದದೊಂದಿಗೆ ಕಂಪನವಾಗಿದೆ.
ಜನ ತಮ್ಮ ಸಂಬಂಧಿಕರು ಸ್ನೇಹಿತರಿಗೆ ಕರೆ ಮಾಡಿ ಭೂಕಂಪನದ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪನದ ಭಾರೀ ಚರ್ಚೆಯಾಗಿದೆ.