
ನವದೆಹಲಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ತಡರಾತ್ರಿ 2.25ಕ್ಕೆ 5 ಬಾರಿ ಭೂಮಿ ಕಂಪಿಸಿದೆ.
ಗುರುವಾರ ಮುಂಜಾನೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ ಐದು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(NCS) ತಿಳಿಸಿದೆ. ಭೂಕಂಪ ಮೇಲ್ವಿಚಾರಣಾ ಸಂಸ್ಥೆಯ ಪ್ರಕಾರ, ಬೆಳಗಿನ ಜಾವ 2:25 ರ ಸುಮಾರಿಗೆ 16 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.
An earthquake with a magnitude of 5.0 on the Richter Scale hit Morigaon, Assam at 2.25 am today
(Source – National Center for Seismology) pic.twitter.com/iowhZjOJHk
— ANI (@ANI) February 26, 2025