
ನವದೆಹಲಿ: ರಾಜಸ್ಥಾನದಲ್ಲಿ ಶನಿವಾರ ಭೂಕಂಪನದ ಅನುಭವವಾಗಿದೆ. ರಾಜಸ್ಥಾನದ ಪಾಲಿಯಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಾತ್ರಿ 1.29 ಕ್ಕೆ ಭೂಕಂಪದ ಅನುಭವವಾಗಿದೆ. ಆದರೆ, ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ. ಇದಕ್ಕೂ ಕೆಲವೇ ಗಂಟೆಗಳ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿತ್ತು.
ರಾಜಸ್ಥಾನದ ಪಾಲಿಯಲ್ಲಿ ಶನಿವಾರ 3.7 ತೀವ್ರತೆಯ ಭೂಕಂಪ ಸಂಭವಿಸಿದೆ. ಮಧ್ಯರಾತ್ರಿ 1.29ಕ್ಕೆ ಕಂಪನದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ.