ಆಂಧ್ರಪ್ರದೇಶದ ತಿರುಪತಿಯಲ್ಲಿ 3.6 ತೀವ್ರತೆಯ ಭೂಕಂಪನವಾಗಿದೆ. ಭಾನುವಾರ ತಿರುಪತಿ ನಗರದಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ(NCS), ಭೂಕಂಪವು ತಿರುಪತಿಯ ಈಶಾನ್ಯಕ್ಕೆ 85 ಕಿಮೀ ದೂರದಲ್ಲಿ ಸುಮಾರು ರಾತ್ರಿ 1.10 ಗಂಟೆಗೆ ಸಂಭವಿಸಿದೆ.
ಭೂಕಂಪನ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.6 ರಷ್ಟು ದಾಖಲಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದಿಂದ ಟ್ವೀಟ್ ಮಾಡಲಾಗಿದೆ.