ಬೀಜಿಂಗ್: ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ ಬುಧವಾರ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಚೀನಾ ಭೂಕಂಪ ನೆಟ್ ವರ್ಕ್ ಕೇಂದ್ರ(ಸಿಇಎನ್‌ಸಿ) ತಿಳಿಸಿದೆ.
ಸ್ಥಳೀಯ ಕಾಲಮಾನ ಸಂಜೆ 5 ಗಂಟೆಗೆ ಯಾ ನಗರದ ಲುಶನ್ ಕೌಂಟಿಯಲ್ಲಿ ಭೂಕಂಪ ಸಂಭವಿಸಿದೆ. 17 ಕಿ.ಮೀ ಆಳವಿರುವ ಭೂಕಂಪದ ಕೇಂದ್ರವನ್ನು 30.37 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಗಮನಿಸಲಾಗಿದೆ ಎಂದು ಸಿಇಎನ್‌ಸಿಯನ್ನು ಉಲ್ಲೇಖಿಸಿ ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚೀನಾದ ಸಿಚುವಾನ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ನಾಲ್ವರು ಸಾವನ್ನಪ್ಪಿದ್ದು, 14 ಜನರಿಗೆ ಗಂಭೀರವಾದ ಗಾಯಗಳಾಗಿವೆ. 4500 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
2013 ರಲ್ಲಿ ಯಾನ್ ಪ್ರಬಲವಾದ ಭೂಕಂಪಕ್ಕೆ ತುತ್ತಾಗಿತ್ತು. 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರಲ್ಲದೇ, ಸಾವಿರಾರು ಜನರು ಗಾಯಗೊಂಡಿದ್ದರು.