ನವದೆಹಲಿ: ಭಾನುವಾರ ಮುಂಜಾನೆ ಹರಿಯಾಣದ ಜಜ್ಜರ್ ನಲ್ಲಿ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್ಸಿಎಸ್) ತಿಳಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಕಂಪದ ಕಂಪನದ ಅನುಭವವಾಗಿದೆ.
NCS ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ.
ಎನ್ಸಿಎಸ್ ಪ್ರಕಾರ, ಹರಿಯಾಣದ ಜಜ್ಜರ್ನ ವಾಯುವ್ಯದಲ್ಲಿ ಮಧ್ಯರಾತ್ರಿ 1:19 ಕ್ಕೆ ಭೂಕಂಪ ಸಂಭವಿಸಿದೆ. ನೆಲದಿಂದ 5 ಕಿ.ಮೀ. ಆಳದಲ್ಲಿದೆ. ನವೆಂಬರ್ 12 ರಂದು ದೆಹಲಿ ಎನ್ಸಿಆರ್ ನಾದ್ಯಂತ ಭೂಕಂಪನದ ಅನುಭವವಾಗಿತ್ತು.