ಕೊಡಗು -ದಕ್ಷಿಣ ಕನ್ನಡ ಜಿಲ್ಲೆ ಗಡಿ ಭಾಗದಲ್ಲಿ ಮತ್ತೆ ಲಘು ಭೂಕಂಪನ ಸಂಭವಿಸಿದೆ. ತಡರಾತ್ರಿ 1.12 ಗಂಟೆ ವೇಳೆಗೆ ಗಡಿ ಭಾಗದಲ್ಲಿ ಲಘು ಭೂಕಂಪನವಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ 5 ಬಾರಿ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ವೇಳೆ ಭೂಕಂಪನವಾಗಿರುವುದು ಮೊದಲೇ ಆತಂಕದಲ್ಲಿದ್ದ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.