ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಆತಂಕ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಮುಳವಾಡ ಗ್ರಾಮದಲ್ಲಿ ಜನತೆಗೆ ಭೂಕಂಪನದ ಅನುಭವವಾಗಿತ್ತು. ಇದೀಗ ಮತ್ತೆ ಭೂಮಿ ಕಂಪಿಸಿದ್ದು ಜನತೆ ಕಂಗಾಲಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮುಳವಾಡ ಗ್ರಾಮದಲ್ಲಿ ಇಂದು ಬೆಳಗ್ಗೆ 6:03ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿನ್ನೆ ಬೆಳಗ್ಗೆ ಎರಡು ಬಾರಿ ಅಂದರೆ 5: 15 ಹಾಗೂ 7:10ರ ಸುಮಾರಿಗೆ ಭೂಮಿ ನಡುಗಿತ್ತು. ಅಲ್ಲದೇ ಅಕ್ಟೋಬರ್ 5ರಂದು ಬೆಳಗ್ಗೆ 5:15ರ ಸುಮಾರಿಗೂ ಭೂಕಂಪನವಾಗಿದೆ. ಪದೇ ಪದೇ ಭೂಮಿ ಕಂಪಿಸುತ್ತಿರುವುದು ಈ ಭಾಗದ ಜನತೆಗೆ ಆತಂಕ ಸೃಷ್ಟಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಉಪವಿಭಾಗಾಧಿಕಾರಿ ಬಲರಾಮ ಲುಮಾಣಿ, ಮುಳವಾಡ ಗ್ರಾಮದಲ್ಲಿ ಸತತ ಎರಡು ದಿನಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿದೆ. ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ, ಈ ವಾರ ಮುಳವಾಡ ಗ್ರಾಮಕ್ಕೆ ತಜ್ಞರ ತಂಡ ಭೇಟಿ ನೀಡಲಿದ್ದು ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.