ಕಚ್ : ಗುಜರಾತ್(Gujarat) ನಲ್ಲಿ ಬಿಪರ್ ಜಾಯ್ ಚಂಡಮಾರುತ(Cyclone Biparjoy) ದ ಅಬ್ಬರದ ನಡುವೆ ಇಂದು ಗುಜರಾತ್ ನ ಕಚ್ ಜಿಲ್ಲೆ (Kutch district)ಯಲ್ಲಿ ಭೂಕಂಪನವಾಗಿದೆ (Earthquake) ಎಂದು ವರದಿಯಾಗಿದೆ.
ಗುಜರಾತ್ ಪ್ರಸ್ತುತ ಡಬಲ್ ಸಮಸ್ಯೆಯನ್ನು ಎದುರಿಸುತ್ತಿದೆ. ಒಂದು ಕಡೆ ಬಿಪರ್ ಜಾಯ್ ಚಂಡಮಾರುತ ಮತ್ತು ಇನ್ನೊಂದು ಕಡೆ ಭೂಕಂಪ. ಗುಜರಾತ್ನ ಕಚ್ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.
ಚಂಡಮಾರುತದಿಂದಾಗಿ 69 ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ, ರಾಜ್ಕೋಟ್, ಮೊರ್ಬಿ, ಜಾಮ್ನಗರ್, ಓಖಾ, ದ್ವಾರಕಾದಲ್ಲಿ 2500 ಕ್ಕೂ ಹೆಚ್ಚು ರೈಲ್ವೆ ಉದ್ಯೋಗಿಗಳನ್ನು ನಿಯೋಜಿಸಲಾಗಿದೆ.