ಮುಂಬೈ ಮಹಾನಗರದ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 20 ಟನ್‌ಗಳಷ್ಟು ಟೊಮ್ಯಾಟೋ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾರಣ ಪಕ್ಕದ ಥಾಣೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಸಂಭವಿಸಿತ್ತು.
ಟೋಮ್ಯಾಟೋ ರಾಶಿಯನ್ನು ತೆರವುಗೊಳಿಸಲು ಅರ್ತ್ ಮೂವರ್‌ಗಳನ್ನು ಕರೆಯಿಸಿದ ಸಂಚಾರಿ ಪೊಲೀಸರು ಎರಡೂ ನಗರಗಳ ನಡವೆ ಸಂಚಾರವನ್ನು ಮರು ಆರಂಭಿಸಲು ನೆರವಾದರು.
ಆಪಲ್ ಹಿಂದಿಕ್ಕಿದ ಶಿಯೋಮಿ: ಸ್ಮಾರ್ಟ್‌ಫೋನ್ ಮಾರಾಟದಲ್ಲಿ 2ನೇ ಸ್ಥಾನಕ್ಕೆ ಜಿಗಿದ ಚೀನಾದ ಟೆಲಿಕಾಂ ದೈತ್ಯ
ಶುಕ್ರವಾರದಂದು ಮಾಯಾನಗರಿಗೆ ಟೊಮ್ಯಾಟೋ ಸರಕು ಹೊತ್ತು ಬರುತ್ತಿದ್ದ ಭಾರೀ ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅದರಲ್ಲಿದ್ದ ಅಷ್ಟೂ ಟೊಮ್ಯಾಟೋ ನೆಲಪಾಲಾಗಿದೆ. ಅಪಘಾತದಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ.
ಟೊಮ್ಯಾಟೋ ಕ್ರೇಟ್‌ಗಳನ್ನು ರಸ್ತೆಯ ಗೋಡೆಗಳಿಂದ ಹೊರಗೆ ಎತ್ತಿ ಸುರಿಯುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ಶೇರ್ ಮಾಡಿಕೊಂಡಿದೆ.