ಇಂದು ವಿಶ್ವಭೂಮಿ ದಿನ. ಸಕಲ ಜೀವ ರಾಶಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ಭೂ ತಾಯಿಯನ್ನು ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಜಾಗತಿಕ ತಾಪಮಾನದಂಥ ದೈತ್ಯ ಸಮಸ್ಯೆಯಿಂದ ಭೂಮಿಯನ್ನು ರಕ್ಷಿಸಿ ನಮ್ಮ ಮುಂಬರುವ ಪೀಳಿಗೆಗೆ ನೀಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ನಿತ್ಯ ಜೀವನದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ.
ಅದರಲ್ಲೂ ನಮ್ಮ ಮನೆಯನ್ನು ಮೊದಲು ಪ್ಲಾಸ್ಟಿಕ್ ಮುಕ್ತಗೊಳಿಸಿದರೆ ನಾವು ಭೂಮಿಗೆ ಮಾಡುವ ದೊಡ್ಡ ಉಪಕಾರವಾಗುತ್ತದೆ. ಏಕೆಂದರೆ ಹವಾಮಾನ ಬದಲಾವಣೆಗೆ ಪ್ಲಾಸ್ಟಿಕ್ ಮುಖ್ಯ ಕಾರಣ. 2050ರ ಹೊತ್ತಿಗೆ ಪ್ಲಾಸ್ಟಿಕ್ 56 ಶತಕೋಟಿ ಟನ್ಗಳಷ್ಟು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಮಾಡುತ್ತದೆ. ಆದ್ದರಿಂದ ಈಗಿನಿಂದಲೇ ನಾವು ಪ್ಲಾಸ್ಟಿಕ್ ಬಳಕೆ ಬದಲಿಗೆ ಜೈವಿಕ ವಿಘಟನೀಯ ವಸ್ತುಗಳನ್ನು ಅಳವಡಿಸಿಕೊಳ್ಳುವುದು ಪರಿಣಾಮಕಾರಿ. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವದಾದ್ಯಂತ ಅಳವಡಿಸಿಕೊಂಡಿರುವ ಎಡಿಬಲ್ ಕಟ್ಲರಿ ಅಂದರೆ ತಿನ್ನಬಹುದಾದ ತಟ್ಟೆ, ಚಮಚಗಳ ಬಳಕೆಯನ್ನು ನಾವು ಅಳವಡಿಸಿಕೊಳ್ಳಬೇಕಿದೆ.
PFI, CFI ಸಂಘಟನೆಗಳಿಂದ ವಿದ್ಯಾರ್ಥಿನಿಯರ ಬ್ಲಾಕ್ ಮೇಲ್; ಮಕ್ಕಳ ಭವಿಷ್ಯ ಹಾಳು ಮಾಡಲು ಷಡ್ಯಂತ್ರ್ಯ; ಆಕ್ರೋಶ ವ್ಯಕ್ತಪಡಿಸಿದ ಶಿಕ್ಷಣ ಸಚಿವ
ತಟ್ಟೆ , ಚಮಚ ತಿನ್ನೋದಾ ಅಂತಾ ಅಚ್ಚರಿ ವ್ಯಕ್ತಪಡಿಸ್ತಿದ್ದೀರಾ ? ಹೌದು! ಯೂಸ್ ಅಂಡ್ ಥ್ರೋ ಫ್ಲಾಸ್ಟಿಕ್ ತಟ್ಟೆ, ಚಮಚಗಳ ಬದಲಿಗೆ ಸಿರಿಧಾನ್ಯ, ಅಕ್ಕಿ, ಗೋಧಿಯಿಂದ ತಯಾರಿಸಿರುವ ಎಡಿಬಲ್ ಕಟ್ಲರಿಗಳನ್ನು ನೀವು ಬಳಸಬಹುದು. ಐಸ್ ಕ್ರೀಂ ತಿನ್ನಲು ಪ್ಲಾಸ್ಟಿಕ್ ಸ್ಪೂನ್ ಬದಲಿಗೆ ತಿನ್ನಬಹುದಾದ ಚಾಕೋಲೆಟ್ ಚಮಚವನ್ನು ಬಳಸಬಹುದು.
ಚಕ್ಕೆ, ಲವಂಗ, ಮೆಣಸು ಸೇರಿದಂತೆ ವಿವಿಧ ಮಸಾಲೆ ಪದಾರ್ಥಗಳ ಮಿಶ್ರಣಗಳನ್ನು ಒಳಗೊಂಡ ಈ ಚಮಚ, ತಟ್ಟೆಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳು ಪ್ಲಾಸ್ಟಿಕ್ ಚಮಚಗಳಿಗಿಂತಲೂ ಕೊಂಚ ಹೆಚ್ಚು ಬೆಲೆಯದ್ದು ಅನಿಸಬಹುದು. ಆದರೆ ನಮ್ಮನ್ನು ರಕ್ಷಿಸುತ್ತಿರುವ ಭೂಮಿಯನ್ನು ಸ್ವಲ್ಪ ಮಟ್ಟಿಗಾದರೂ ರಕ್ಷಿಸುವ ಹೊಣೆ ನಮ್ಮೆಲ್ಲರ ನೈತಿಕ ಕರ್ತವ್ಯ ಅಲ್ಲವೇ?
ಹಾಗಾದರೆ ಇನ್ಮುಂದೆ ನೀವು ಇನ್ಮುಂದೆ ಪ್ಲಾಸ್ಟಿಕ್ ತಟ್ಟೆ. ಚಮಚದ ಬದಲಿಗೆ ತಿನ್ನಬಹುದಾದ ಎಡಿಬಲ್ ಕಟ್ಲರಿಗಳನ್ನು ಹೆಚ್ಚೆಚ್ಚು ಬಳಕೆ ಮಾಡಿ.