alex Certify ಗಳಿಕೆಗೆ ನೆರವಾಗುತ್ತೆ ಮನೆಯಲ್ಲಿರುವ ಚಿನ್ನದ ಆಭರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಳಿಕೆಗೆ ನೆರವಾಗುತ್ತೆ ಮನೆಯಲ್ಲಿರುವ ಚಿನ್ನದ ಆಭರಣ

ಚಿನ್ನವನ್ನು ಅತ್ಯಂತ ಆದ್ಯತೆಯ ಸ್ವತ್ತು ಎಂದು ಪರಿಗಣಿಸಲಾಗುತ್ತದೆ. ಪ್ರತಿ ಭಾರತೀಯನಿಗೂ ಚಿನ್ನವು ಹೂಡಿಕೆಯ ಅತ್ಯಂತ ಮೆಚ್ಚಿನ ವಿಧಾನವಾಗಿದೆ. ಹಣಕಾಸಿನ ಸಮಸ್ಯೆ ಎದುರಾದಾಗ ಚಿನ್ನ ಉಪಯೋಗಕ್ಕೆ ಬರುತ್ತದೆ. ಕೊರೊನಾ ಸಂದರ್ಭದಲ್ಲಿ ಚಿನ್ನ ಅನೇಕರ ಕೈ ಹಿಡಿದಿದೆ. ಭಾರತದಲ್ಲಿ ಆಭರಣ ಚಿನ್ನವನ್ನು ಹೆಚ್ಚಾಗಿ ನಂಬುತ್ತಾರೆ. ಆದ್ರೆ ಹೂಡಿಕೆ ತಜ್ಞರು ಮತ್ತು ನಿಧಿ ವ್ಯವಸ್ಥಾಪಕರು, ಚಿನ್ನದ ಆಭರಣಗಳಿಗಿಂತ ಕಾಗದದ ಚಿನ್ನ ಹೆಚ್ಚು ಉತ್ತಮ ಎನ್ನುತ್ತಾರೆ.

ಮಾರುಕಟ್ಟೆಯ ಚಲನೆಗೆ ಅನುಗುಣವಾಗಿ ಚಿನ್ನದ ಮೌಲ್ಯ ಹೆಚ್ಚುತ್ತಿರುತ್ತದೆ. ಆರ್‌ಬಿಐನ ಎಸ್‌ಜಿಬಿಗಳನ್ನು ಚಿನ್ನದ ಮೆಚ್ಚಿನ ಕಾಗದದ ರೂಪವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಮೌಲ್ಯ ಹೆಚ್ಚಾಗುವ ಜೊತೆಗೆ ಬಡ್ಡಿ ಸಿಗುತ್ತದೆ.

ಸಾಮಾನ್ಯವಾಗಿ ಜನರು ಚಿನ್ನದ ಆಭರಣಗಳನ್ನು ಮನೆಯಲ್ಲಿಡಲು ಬಯಸುವುದಿಲ್ಲ. ಬ್ಯಾಂಕ್ ನ ಲಾಕರ್ ಗಳಲ್ಲಿ ಇಡ್ತಾರೆ. ಆದ್ರೆ ಲಾಕರ್ ಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮನೆಯಲ್ಲಿರುವ ಚಿನ್ನದ ಆಭರಣಗಳಿಂದ ಹೆಚ್ಚು ಗಳಿಸುವ ಒಂದು ಮಾರ್ಗವಿದೆ. ಐಡಿಲ್ ಚಿನ್ನವನ್ನು ಆರ್‌ಬಿಐ ಗೊತ್ತುಪಡಿಸಿದ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಬಡ್ಡಿ ಪಡೆಯಬಹುದು. ಇದು ಆರ್‌ಬಿಐನ ಚಿನ್ನದ ನಗದೀಕರಣ ಯೋಜನೆಯಡಿ ಲಭ್ಯವಿದೆ. ಇದು ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ ಗೆ ಹೋಲುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್  ಸೇರಿದಂತೆ ಹಲವು ಬ್ಯಾಂಕುಗಳು, ಆರ್‌ಬಿಐನ ಚಿನ್ನದ ನಗದೀಕರಣ ಯೋಜನೆಯನ್ನು ಟ್ವಿಟರ್‌ನಲ್ಲಿ ಪ್ರಚಾರ ಮಾಡುತ್ತಿವೆ. ಎಚ್‌ಡಿಎಫ್‌ಸಿ ಬ್ಯಾಂಕ್, ಐಡಲ್ ಬಂಗಾರದ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.  ಬ್ಯಾಂಕ್ ಗೋಲ್ಡ್ ಮಾನಿಟೈಸೇಶನ್ ಯೋಜನೆಯಲ್ಲಿ ಹೂಡಿಕೆ ಮಾಡಿ, ದೀರ್ಘಾವಧಿಯ ಠೇವಣಿಗಳ ಮೇಲೆ ಶೇಕಡಾ 2.50ರಷ್ಟು ಬಡ್ಡಿ ಪಡೆಯಬಹುದು. ಮಧ್ಯಮ ಅವಧಿಯ ಠೇವಣಿಗಳ ಮೇಲೆ ಶೇಕಡಾ 2.25ರಷ್ಟು ಬಡ್ಡಿ ಗಳಿಸಬಹುದು.

ಭಾರತದ ನಿವಾಸಿಯಾಗಿರುವ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಗೋಲ್ಡ್ ಎಫ್‌ಡಿಯನ್ನು ಜಂಟಿ ಹೆಸರಿನಲ್ಲಿ ತೆರೆಯಬಹುದು. ಈ ಯೋಜನೆಯಡಿ ಚಿನ್ನದ ನಾಣ್ಯಗಳು, ರತ್ನಗಳು ಮತ್ತು ಇತರ ಲೋಹಗಳನ್ನು ಹೊರತುಪಡಿಸಿ ಬ್ಯಾಂಕುಗಳು ಕಚ್ಚಾ ಚಿನ್ನವನ್ನು ಆಭರಣ ರೂಪದಲ್ಲಿ ಸ್ವೀಕರಿಸುತ್ತವೆ.

ಹೂಡಿಕೆದಾರರು ಕನಿಷ್ಠ 10 ಗ್ರಾಂ ಕಚ್ಚಾ ಚಿನ್ನವನ್ನು ಠೇವಣಿ ಮಾಡಬಹುದು. ಗರಿಷ್ಠ ಹೂಡಿಕೆಯ ಮಿತಿ ಇಲ್ಲ. ಹೂಡಿಕೆದಾರರು 1 ರಿಂದ 15 ವರ್ಷಗಳ ನಡುವಿನ ಯಾವುದೇ ಅವಧಿಯನ್ನು ಆಯ್ಕೆ ಮಾಡಬಹುದು. ಅಲ್ಪಾವಧಿಯ ಬ್ಯಾಂಕ್ ಠೇವಣಿ 1 ರಿಂದ 3 ವರ್ಷಗಳ ಅವಧಿಯಾಗಿರುತ್ತದೆ. ಮಧ್ಯಮ ಅವಧಿಯ ಸರ್ಕಾರಿ ಠೇವಣಿ ಅವಧಿ 5-7 ವರ್ಷಗಳು. ದೀರ್ಘಾವಧಿಯ ಸರ್ಕಾರಿ ಠೇವಣಿ ಅವಧಿ 12-15 ವರ್ಷಗಳು. ಆದ್ರೆ ಗ್ರಾಹಕ ಠೇವಣಿಯಿಟ್ಟ ರೂಪದಲ್ಲಿಯೇ ಚಿನ್ನ ಸಿಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...