ಸರ್ಕಾರಿ ಕೆಲಸಕ್ಕಾಗಿ ಅನೇಕರು ಪ್ರಯತ್ನ ನಡೆಸುತ್ತಾರೆ. ಆದ್ರೆ ಎಲ್ಲರಿಗೂ ಕೆಲಸ ಸಿಗುವುದಿಲ್ಲ. ಸರ್ಕಾರಿ ಕೆಲಸ ಸಿಗಲಿಲ್ಲ ಎಂಬ ಕಾರಣಕ್ಕೆ ನಿರಾಸೆಯಾಗುವುದು ಬೇಡ. ಸರ್ಕಾರಿ ಬ್ಯಾಂಕ್ ಜೊತೆ ಸೇರಿ ತಿಂಗಳಿಗೆ ಒಂದಿಷ್ಟು ಹಣ ಗಳಿಸಬಹುದು. ಸರ್ಕಾರಿ ಬ್ಯಾಂಕ್‌ಗಳ ಸೇವೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ ಬ್ಯಾಂಕ್ ಮಿತ್ರರಾಗಿ ಕೆಲಸ ಮಾಡಬೇಕಾಗುತ್ತದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಾಲಕಾಲಕ್ಕೆ ಬ್ಯಾಂಕ್ ಮಿತ್ರಕ್ಕಾಗಿ ಅರ್ಜಿ ಕರೆಯುತ್ತದೆ.
ಬ್ಯಾಂಕ್ ಮಿತ್ರರಾದವರು, ಖಾತೆ ತೆರೆಯಲು, ಹಣ ಠೇವಣಿ ಇಡಲು, ಹಣವನ್ನು ಹಿಂಪಡೆಯಲು, ಕ್ರೆಡಿಟ್ ಕಾರ್ಡ್ ಮತ್ತು ಬಿಲ್ ಪಾವತಿಸಲು ನೆರವಾಗಬೇಕು. ಇದಕ್ಕೆ ಬ್ಯಾಂಕ್ ಕಮಿಷನ್ ನೀಡುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಎಲ್ಲಾ ಬ್ಯಾಂಕ್ ಮಿತ್ರರಿಗೆ 1.25 ಲಕ್ಷ ರೂಪಾಯಿ ಸಾಲ ಸೌಲಭ್ಯವೂ ಸಿಗ್ತಿದೆ. 50,000 ರೂಪಾಯಿ ಸರಕುಗಳಿಗಾಗಿ, 25,000 ರೂಪಾಯಿ ಕೆಲಸಕ್ಕೆ ಮತ್ತು 50,000 ರೂಪಾಯಿ ವಾಹನಕ್ಕಾಗಿ ಸಾಲ ಸಿಗುತ್ತದೆ. ಪ್ರತಿ ತಿಂಗಳು 2000 ರಿಂದ 5000 ರೂಪಾಯಿ ಕಮಿಷನ್ ರೂಪದಲ್ಲಿ ಸಿಗುತ್ತದೆ.
ಬ್ಯಾಂಕ್ ಮಿತ್ರದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರು, ಗುರುತಿಗಾಗಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಮತದಾರರ ಕಾರ್ಡ್ ನಕಲು ನೀಡಬೇಕು. 10ನೇ ತರಗತಿಯ ಅಂಕಪಟ್ಟಿ ಪ್ರಮಾಣ ಪತ್ರ ನೀಡಬೇಕು. ವಿದ್ಯುತ್ ಬಿಲ್, ದೂರವಾಣಿ ಬಿಲ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ವ್ಯಾಪಾರದ ವಿಳಾಸಕ್ಕಾಗಿ ಪಾಸ್‌ಪೋರ್ಟ್‌ನ ಪ್ರತಿ ನೀಡಬೇಕು. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಬ್ಯಾಂಕ್ ಪಾಸ್‌ಬುಕ್ ಅಥವಾ ರದ್ದಾದ ಚೆಕ್‌ನ ಪ್ರತಿ ಕೂಡ ನೀಡಬೇಕು.