ದುಬಾರಿ ದುನಿಯಾದಲ್ಲಿ ನೌಕರಿ ನಂಬಿರಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ಕೊರೊನಾ ಹೆಸರಿನಲ್ಲಿ ನೌಕರರನ್ನು ಕೆಲಸದಿಂದ ತೆಗೆದಿವೆ. ಇಂಥ ಸಂದರ್ಭದಲ್ಲಿ ಜನರು ಸ್ವಂತ ಉದ್ಯೋಗದ ಹುಡುಕಾಟ ನಡೆಸುತ್ತಿದ್ದಾರೆ. ಅಂಥವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮತ್ತು ಮಾರಾಟದ ವ್ಯವಹಾರ ಶುರು ಮಾಡಬಹುದು.
ಆರ್ಥಿಕ ಸಂಕಷ್ಟದಿಂದಾಗಿ ಜನರು ಫಸ್ಟ್ ಹ್ಯಾಂಡ್ ಕಾರಿನ ಬದಲು ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಈ ವ್ಯವಹಾರದಲ್ಲಿ ಕಮಿಷನ್ ಪಡೆಯಬಹುದು. ದೊಡ್ಡ ಮಟ್ಟದಲ್ಲಿ ಇದನ್ನು ಪ್ರಾರಂಭಿಸುವ ಪ್ಲಾನ್ ನಲ್ಲಿದ್ದರೆ 2 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಸಣ್ಣದಾಗಿ ವ್ಯಾಪಾರ ಶುರು ಮಾಡಲು ಬಯಸುವವರು, 50,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಬಾಡಿಗೆ ಜಾಗ ಖರೀದಿ ಸಾಧ್ಯವಿಲ್ಲವೆಂದ್ರೆ ಮನೆಯನ್ನೇ ಕಚೇರಿ ಮಾಡಿಕೊಳ್ಳಬಹುದು. ಆದ್ರೆ ಕಾರುಗಳನ್ನು ನಿಲ್ಲಿಸಲು ಜಾಗದ ಅವಶ್ಯಕತೆಯಿರುತ್ತದೆ. ಮನಸ್ಸು ಮಾಡಿದ್ರೆ ತಿಂಗಳಿಗ 4 ಲಕ್ಷ ರೂಪಾಯಿವರೆಗೆ ಇದ್ರಲ್ಲಿ ಹಣ ಗಳಿಸಬಹುದು.
ಅಗ್ಗದ ಬೆಲೆಗೆ ಕಾರುಗಳನ್ನು ಖರೀದಿಸಿ ಮಾರಾಟ ಮಾಡಬಹುದು. ಬೇಡಿಕೆಗೆ ತಕ್ಕಂತೆ ನೀವು ಕೆಲಸ ಮಾಡಬೇಕಾಗುತ್ತದೆ. ಆರಂಭದಲ್ಲಿಯೇ ಒಂದಿಷ್ಟು ಕಾರುಗಳನ್ನು ಖರೀದಿಸಿಟ್ಟುಕೊಳ್ಳುವ ಅಗತ್ಯವಿಲ್ಲ. ದೆಹಲಿ, ಮುಂಬೈ, ಕೋಲ್ಕತಾ ಮತ್ತು ಹೈದರಾಬಾದ್ ನಂತಹ ದೊಡ್ಡ ನಗರಗಳಿಂದ ಅಗ್ಗದ ಬೆಲೆಗೆ ಬಳಸಿದ ಕಾರುಗಳನ್ನು ಖರೀದಿಸಬಹುದು.