ಅಂಚೆ ಕಚೇರಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಇದಕ್ಕಾಗಿ ಕೇವಲ 5000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂಚೆ ಕಚೇರಿ ಫ್ರ್ಯಾಂಚೈಸ್ ನೀಡುತ್ತಿದೆ. ಅಂದ್ರೆ ಅಂಚೆ ಕಚೇರಿ ತೆರೆಯುವ ಮೂಲಕ ನೀವು ಹಣವನ್ನು ಗಳಿಸಬಹುದು.
ದೇಶದಲ್ಲಿ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಿವೆ. ಆದ್ರೆ ಇನ್ನೂ ಅನೇಕ ಕಡೆ ಅಂಚೆ ಕಚೇರಿ ಸೌಲಭ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಫ್ರ್ಯಾಂಚೈಸ್ ನೀಡಲಾಗುತ್ತಿದೆ. ಅಂಚೆ ಕಚೇರಿಯಿಂದ ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡಲಾಗುತ್ತದೆ. ಮೊದಲ ಫ್ರಾಂಚೈಸಿ ಔಟ್‌ಲೆಟ್. ಎರಡನೆಯದು ಅಂಚೆ ಏಜೆಂಟರ್ ಫ್ರ್ಯಾಂಚೈಸಿ ಆಗಿದೆ. ಇದ್ರಲ್ಲಿ ಯಾವುದನ್ನಾದ್ರೂ ನೀವು ತೆಗೆದುಕೊಳ್ಳಬಹುದು.
ಫ್ರ್ಯಾಂಚೈಸ್ ತೆಗೆದುಕೊಳ್ಳುವ ವ್ಯಕ್ತಿಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು. ಯಾವುದೇ ಭಾರತೀಯ ನಾಗರಿಕರು ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ತೆಗೆದುಕೊಳ್ಳಬಹುದು. ಫ್ರ್ಯಾಂಚೈಸ್ ತೆಗೆದುಕೊಳ್ಳುವ ವ್ಯಕ್ತಿ 8ನೇ ತರಗತಿ ಪಾಸ್ ಆಗಿರಬೇಕು. ಫ್ರ್ಯಾಂಚೈಸಿಗಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾದ್ಮೇಲೆ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ.
ಈ ಫ್ರ್ಯಾಂಚೈಸಿ ತೆಗೆದುಕೊಳ್ಳಲು 5000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಫ್ರ್ಯಾಂಚೈಸಿ ಪಡೆದ ನಂತರದ ಸಂಪಾದನೆ ನಿಮ್ಮ ಕೆಲಸವನ್ನು ಅವಲಂಭಿಸಿದೆ. https://www.indiapost.gov.in/VAS/DOP_PDFFiles/Franchise.pdf ನಲ್ಲಿ ನಿಮಗೆ ಮಾಹಿತಿ ಜೊತೆ ಫಾರ್ಮ್ ಸಿಗುತ್ತದೆ.