ಕೆಲಸದ ಹುಡುಕಾಟದಲ್ಲಿದ್ದರೆ ಅಥವಾ ಬೋರಿಂಗ್ ಕೆಲಸದಿಂದ ಬೇಸತ್ತು ಬೇರೆ ಉದ್ಯೋಗ ಮಾಡುವ ಪ್ಲಾನ್ ನಲ್ಲಿದ್ದರೆ ಚಿಂತಿಸುವ ಅಗತ್ಯವಿಲ್ಲ. ಪ್ರತಿ ತಿಂಗಳು ಒಳ್ಳೆ ಆದಾಯ ಗಳಿಸುವ ಉದ್ಯೋಗವೊಂದು ಇಲ್ಲಿದೆ. ನೀವು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ ಜೊತೆ ಕೈ ಜೋಡಿಸಿ ಹಣ ಗಳಿಸಬಹುದು. ಐಆರ್ಸಿಟಿಸಿ ಏಜೆಂಟ್ ಆಗಿ ನೀವು ಹಣ ಗಳಿಸಬಹುದು. ಭಾರತೀಯ ರೈಲ್ವೆ ಅಂಗಸಂಸ್ಥೆಯಾದ ಐಆರ್‌ಸಿಟಿಸಿ, ರೈಲ್ವೆ ಟಿಕೆಟ್ ಏಜೆಂಟ್ ಆಗುವ ಅವಕಾಶ ನೀಡುತ್ತಿದೆ.
ಆರ್‌ಟಿಎಸ್‌ಎ ಯೋಜನೆಯನ್ನು 1985 ರಲ್ಲಿ ಜಾರಿಗೆ ತರಲಾಯಿತು. ಏಜೆಂಟ್, ರೈಲು ಟಿಕೆಟ್ ಬುಕ್ ಮಾಡುವ ಮೂಲಕ ಕಮಿಷನ್ ಪಡೆಯುತ್ತಾನೆ. ಪ್ರತಿ ಟಿಕೆಟ್ ಬುಕ್ಕಿಂಗ್ ಗೆ ರೈಲ್ವೆ, ಕಮಿಷನ್ ನೀಡುತ್ತದೆ. ಬೇರೆ ಬೇರೆ ಬೋಗಿ ಟಿಕೆಟ್ ಬುಕ್ಕಿಂಗ್ ಗೆ ಬೇರೆ ಬೇರೆ ಕಮಿಷನ್ ನೀಡಲಾಗುವುದು.
ಒಂದು ತಿಂಗಳಲ್ಲಿ ಏಜೆಂಟರು ಬುಕ್ ಮಾಡುವ ಟಿಕೆಟ್ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಆದ್ದರಿಂದ ಒಂದು ತಿಂಗಳಲ್ಲಿ ಅನಿಯಮಿತ ಸಂಖ್ಯೆಯ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಏಜೆಂಟರ್ ಪ್ರತಿ ಬುಕಿಂಗ್ ಮತ್ತು ವಹಿವಾಟಿನ ಮೇಲೆ ಕಮಿಷನ್ ಪಡೆಯುತ್ತಾರೆ. ಒಬ್ಬ ಏಜೆಂಟ್ ತಿಂಗಳಿಗೆ 80,000 ರೂಪಾಯಿವರೆಗೆ ನಿಯಮಿತ ಆದಾಯವನ್ನು ಗಳಿಸಬಹುದು. ತಿಂಗಳಿಗೆ 40 ಸಾವಿರ ಆರಾಮವಾಗಿ ಗಳಿಸಬಹುದು.
ಐಆರ್ಸಿಟಿಸಿ ಏಜೆಂಟ್ ಆಗಲು ಬಯಸುವವರು 12 ನೇ ತರಗತಿ ಪಾಸ್ ಆಗಿರಬೇಕು. ಐ ಆರ್ ಸಿ ಟಿ ಸಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕೆ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಮಾನ್ಯ ಇಮೇಲ್ ಐಡಿ, ಫೋಟೋ, ಮನೆ ವಿಳಾಸದ ಪುರಾವೆ ನೀಡಬೇಕಾಗುತ್ತದೆ.
ಏಜೆಂಟ್ ಆಗಲು ನೀವು ಶುಲ್ಕ ಪಾವತಿ ಮಾಡಬೇಕು. ವರ್ಷದ ಏಜೆನ್ಸಿ ಶುಲ್ಕವಾಗಿ 3,999 ರೂಪಾಯಿ ನೀಡಬೇಕು. ಎರಡು ವರ್ಷಗಳ ಏಜೆನ್ಸಿ ಶುಲ್ಕ ಒಟ್ಟಿಗೆ ನೀಡುವುದಾದಲ್ಲಿ 6,999 ರೂಪಾಯಿ ನೀಡಬೇಕು. ಡಿಡಿ ಮೂಲಕ ನೀವು ಹಣ ಪಾವತಿ ಮಾಡಬೇಕು.