ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚಿಗೆ ಹಣ ಗಳಿಸುವ ದಾರಿ ಹುಡುಕುತ್ತಿದ್ದಾರೆ. ಕೆಲಸ, ಉದ್ಯೋಗದ ಜೊತೆ ಹೆಚ್ಚುವರಿ ಹಣ ಗಳಿಸಬೇಕೆಂಬ ಬಯಕೆ ಎಲ್ಲರಲ್ಲೂ ಇದೆ. ಎಲ್ಲರ ಬಳಿ ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಇರುತ್ತದೆ. ಸ್ಮಾರ್ಟ್ಫೋನ್ ನಲ್ಲಿ ಮನೆಯಲ್ಲೇ ಕುಳಿತು ಹಣ ಗಳಿಸುವ ಅವಕಾಶವನ್ನು ಕೆಲ ಅಪ್ಲಿಕೇಷನ್ ಗಳು ನೀಡ್ತಿವೆ. ಸ್ಮಾರ್ಟ್ಫೋನ್ ನಲ್ಲಿ ಹಣ ಗಳಿಸಲು ಮೂರು ಅಪ್ಲಿಕೇಷನ್ ಅವಕಾಶ ನೀಡ್ತಿದೆ.
EarnKaro : ಇದು ಭಾರತೀಯ ಆಪ್ ಆಗಿದ್ದು, ಕ್ಯಾಶ್ ಬ್ಯಾಕ್ ನೀಡುತ್ತದೆ. ಈ ಆಪ್ ಮೂಲಕ ಹಣ ಗಳಿಸುವುದು ತುಂಬಾ ಸುಲಭ. ಇಲ್ಲಿ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಅನುಯಾಯಿಗಳಿಗೆ ಡೀಲ್ ಗಳನ್ನು ಹಂಚಿಕೊಳ್ಳಬೇಕು. EarnKaro ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಪಟ್ಟಿ ಮಾಡಲಾದ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಚಾರ ಮಾಡಬೇಕು. ಅದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಹಂಚಿಕೊಳ್ಳಬಹುದು. ಹಂಚಿಕೊಂಡ ಲಿಂಕ್ ತೆರೆಯುವ ಮೂಲಕ ಯಾರಾದರೂ ಶಾಪಿಂಗ್ ಮಾಡಿದರೆ, ನಗದು ಕಮಿಷನ್ ಸಿಗುತ್ತದೆ. ಅದನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಬಾರಿ ಈ ಅಪ್ಲಿಕೇಷನ್ ಡೌನ್ಲೋಡ್ ಆಗಿದೆ.
ವೈಸೆನ್ಸ್ : ವೈಸೆನ್ಸ್ ಆಪ್ ಮೂಲಕವೂ ಜನ ಹಣ ಗಳಿಸಬಹುದು. ಅನೇಕ ದೊಡ್ಡ ಕಂಪನಿಗಳು ವೈಸೆನ್ಸ್ ಆಪ್ ಮೂಲಕ ಜನರಿಗೆ ಆಫರ್ ನೀಡುತ್ತವೆ. ಇದರಲ್ಲಿ ಅನೇಕ ಸಮೀಕ್ಷೆಗಳಿರುತ್ತವೆ. ಅದನ್ನು ಪೂರ್ಣಗೊಳಿಸಿದ್ರೆ ಹಣ ಸಿಗುತ್ತದೆ. ಗಿಫ್ಟ್ ವೋಚರ್ ಗಳು ಸಹ ಸಿಗುತ್ತವೆ. ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ.
ಟಾಸ್ಕ್ ಮೇಟ್: ಟಾಸ್ಕ್ ಮೇಟ್ ಒಂದು ಗೂಗಲ್ ಆಪ್. ಇದು ಪ್ರಸ್ತುತ ಬೀಟಾ ಆವೃತ್ತಿಯಲ್ಲಿದೆ. ಇದ್ರಲ್ಲಿ ಅನೇಕ ಆಯ್ಕೆ ಇರುತ್ತದೆ. ಉದಾಹರಣೆಗೆ ಇಂಗ್ಲಿಷ್ ಸಾಲನ್ನು ನಿಮ್ಮ ಭಾಷೆಗೆ ಭಾಷಾಂತರಿಸಿ, ರೆಸ್ಟೋರೆಂಟ್ ಫೋಟೋ ತೆಗೆಯಿರಿ ಹೀಗೆ. ಇದರಲ್ಲಿ ನಿಮ್ಮ ಆಯ್ಕೆಯ ಕೆಲಸವನ್ನು ನೀವು ಮಾಡಬಹುದು. ಕೆಲಸವನ್ನು ಪೂರ್ಣಗೊಳಿಸಲು ನೀವು ಹಣವನ್ನು ಸಹ ಪಡೆಯುತ್ತೀರಿ.