ಕೊರೊನಾ ಸಮಯದಲ್ಲಿ ಕಚೇರಿಗೆ ಹೋಗಿ ದುಡಿಯುವ ಬದಲು ಜನರು ಮನೆಯಲ್ಲೇ ಹಣ ಗಳಿಸುವ ವಿಧಾನಗಳನ್ನು ಹುಡುಕುತ್ತಿದ್ದಾರೆ. ಮನೆಯಲ್ಲೇ ಹಣ ಗಳಿಸಲು ಬಯಸುವವರಿಗೆ ಎಸ್ಬಿಐ ಉತ್ತಮ ಅವಕಾಶ ನೀಡ್ತಿದೆ. ಮನೆಯಲ್ಲಿ ಕುಳಿತು ತಿಂಗಳಿಗೆ 60 ಸಾವಿರ ರೂಪಾಯಿವರೆಗೆ ಗಳಿಸುವ ಅವಕಾಶವಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಫ್ರ್ಯಾಂಚೈಸ್ ತೆಗೆದುಕೊಳ್ಳುವ ಮೂಲಕ ಸುಲಭವಾಗಿ ಹಣ ಗಳಿಸಬಹುದು. ಯಾವುದೇ ಬ್ಯಾಂಕ್, ಬ್ಯಾಂಕ್ ಎಟಿಎಂ ಸ್ಥಾಪನೆ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ಕಂಪನಿಯಿದೆ. ಆ ಕಂಪನಿಗೆ ಬ್ಯಾಂಕ್ ಗುತ್ತಿಗೆ ನೀಡುತ್ತದೆ.
ಆ ಕಂಪನಿಯಿಂದ ನೀವು ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳುವ ಮೂಲಕ ಉತ್ತಮ ಹಣ ಗಳಿಸಬಹುದು. ಎಸ್ಬಿಐನ ಎಟಿಎಂ ಫ್ರ್ಯಾಂಚೈಸ್ ತೆಗೆದುಕೊಳ್ಳಲು 50-80 ಚದರ ಅಡಿ ಜಾಗವನ್ನು ಹೊಂದಿರಬೇಕು. ಇತರ ಎಟಿಎಂಗಳಿಂದ ಇದರ ದೂರವು 100 ಮೀಟರ್ ಆಗಿರಬೇಕು. ನೆಲ ಮಹಡಿಯಲ್ಲಿ ಜಾಗವಿರಬೇಕು. 24 ಗಂಟೆಗಳ ವಿದ್ಯುತ್ ಪೂರೈಕೆ ಇರಬೇಕು. 1 ಕೆಡಬ್ಲ್ಯ ವಿದ್ಯುತ್ ಸಂಪರ್ಕ ಕಡ್ಡಾಯ. ಎಟಿಎಂ ದಿನಕ್ಕೆ ಸುಮಾರು 300 ವಹಿವಾಟುಗಳ ಸಾಮರ್ಥ್ಯವನ್ನು ಹೊಂದಿರಬೇಕು. ಎಟಿಎಂ ಜಾಗವು ಕಾಂಕ್ರೀಟ್ ಛಾವಣಿಯನ್ನು ಹೊಂದಿರಬೇಕು.
ಎಟಿಎಂ ಸ್ಥಾಪಿಸಲು ಬಯಸಿದ್ದರೆ ಐಡಿ ಪುರಾವೆಯಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಕಾರ್ಡ್ ನೀಡಬೇಕು. ವಿಳಾಸ ಪುರಾವೆಯಾಗಿ ಪಡಿತರ ಚೀಟಿ, ವಿದ್ಯುತ್ ಬಿಲ್ ನೀಡಬೇಕು. ಬ್ಯಾಂಕ್ ಖಾತೆ ಮತ್ತು ಪಾಸ್ ಬುಕ್ ನೀಡಬೇಕು. ಫೋಟೋ, ಇ-ಮೇಲ್ ಐಡಿ, ಫೋನ್ ಸಂಖ್ಯೆ, ಜಿಎಸ್ಟಿ ಸಂಖ್ಯೆ ನೀಡಬೇಕಾಗುತ್ತದೆ.
ಫ್ರ್ಯಾಂಚೈಸಿಗೆ ಅರ್ಜಿ ಸಲ್ಲಿಸಬಯಸುವವರು, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಟಾಟಾ ಇಂಡಿಕಾಶ್ – www.indicash.co.in . ಮುತ್ತೂಟ್ ಎಟಿಎಂ-www.muthootatm.com/suggest- atm.html. ಇಂಡಿಯಾ ಒನ್ ಎಟಿಎಂ india1atm.in/rent-your-space. ಇದ್ರಲ್ಲಿ ಒಂದನ್ನು ಆಯ್ದು ಅರ್ಜಿ ಸಲ್ಲಿಸಬೇಕು. ಈ ಕಂಪನಿಗಳ ಭದ್ರತಾ ಠೇವಣಿ ಬೆಲೆ ಬೇರೆ ಬೇರೆ ಇದೆ.