ಸದಾ ಬೇಡಿಕೆಯಿರುವ, ಎಲ್ಲ ಋತುವಿನಲ್ಲಿ ಅಗತ್ಯವಿರುವ ವ್ಯಾಪಾರ ಶುರು ಮಾಡಿದಲ್ಲಿ ಕೈತುಂಬ ಸಂಪಾದನೆ ಮಾಡಬಹುದು. ಪ್ರತಿಯೊಬ್ಬರ ಮನೆಯಲ್ಲಿ, ಪ್ರತಿ ದಿನ ಬಳಸುವ ವಸ್ತುಗಳಲ್ಲಿ ಟೂತ್ ಪೇಸ್ಟ್ ಕೂಡ ಒಂದು. ಇದ್ರ ಬ್ಯುಸಿನೆಸ್ ಶುರು ಮಾಡುವ ಮೂಲಕ ತಿಂಗಳಿಗೆ 80 ಸಾವಿರ ರೂಪಾಯಿವರೆಗೆ ಗಳಿಸಬಹುದು.
ಈ ರೀತಿಯ ಉತ್ಪನ್ನಕ್ಕೆ ಮಾರ್ಕೆಟಿಂಗ್ ಅತ್ಯಂತ ಮುಖ್ಯವಾಗಿದೆ. ಆದರೆ ಸಾವಯವ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪನಿಗಳು ಈ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ನೀಡ್ತಿವೆ. ವಿವಿಧ ಫ್ಲೇವರ್‌ಗಳಲ್ಲೂ ಬಿಡುಗಡೆ ಮಾಡಲಾಗುತ್ತಿದೆ.
ಈ ವ್ಯವಹಾರವನ್ನು ಪ್ರಾರಂಭಿಸಲು ಯಂತ್ರ, ಸ್ಥಳ, ವಿದ್ಯುತ್ ಸೌಲಭ್ಯ ಮತ್ತು ಜಿಎಸ್ಟಿ ಸಂಖ್ಯೆ ಅಗತ್ಯವಿದೆ. ವ್ಯವಹಾರ ಶುರು ಮಾಡಲು ಸುಮಾರು 500 ರಿಂದ 700 ಚದರ ಅಡಿ ಜಾಗ ಬೇಕಾಗುತ್ತದೆ. ಅನೇಕ ಕಂಪನಿಗಳು ಟೂತ್‌ಪೇಸ್ಟ್ ತಯಾರಿಸುವ ವ್ಯವಹಾರವನ್ನು ಮಾಡುತ್ತಿವೆ.
ಕೋಲ್ಗೇಟ್, ಪೆಪ್ಸೋಡೆಂಟ್, ಡಾಬರ್, ಕ್ಲೋಸ್ ಅಪ್, ಓರಲ್-ಬಿ ಮತ್ತು ಪತಂಜಲಿ ಮುಂತಾದ ಅನೇಕ ಕಂಪನಿಗಳು ಈ ವ್ಯವಹಾರದಲ್ಲಿ ಉತ್ತಮ ಲಾಭ ಮಾಡ್ತಿವೆ.
ಈ ವ್ಯವಹಾರವನ್ನು ಸಣ್ಣ ಮಟ್ಟದಲ್ಲೂ ಮಾಡಬಹುದು. ಸ್ವಂತ ಜಾಗವಿದ್ದಲ್ಲಿ ಕಡಿಮೆ ಹೂಡಿಕೆ ಮಾಡಿದ್ರೆ ಸಾಕು. ಯಂತ್ರಕ್ಕೆ ಕನಿಷ್ಠ 50 ಸಾವಿರದಿಂದ 1.50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕಚ್ಚಾ ವಸ್ತುಗಳಿಗಾಗಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬೇಕು. ದೊಡ್ಡ ಮಟ್ಟದಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಿದ್ರೆ ಪ್ರತಿ ತಿಂಗಳು 80 ಸಾವಿರದಿಂದ ಒಂದು ಲಕ್ಷ ರೂಪಾಯಿಗಳನ್ನು ಗಳಿಸಬಹುದು.